Advertisement

Mangaluru ಪಿಲಿಕುಳದಲ್ಲಿ “ಆದಿತ್ಯ’ ವೀಕ್ಷಣೆಗೆ ಜನರ ದಂಡು

12:07 AM Sep 03, 2023 | Team Udayavani |

ಮಂಗಳೂರು: ಆದಿತ್ಯ -ಎಲ್‌ 1 ಉಡ್ಡಯನದ ನೇರ ಪ್ರಸಾರ ವೀಕ್ಷಣೆಗೆ ಶನಿವಾರ ನೂರಾರು ಮಂದಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದರು.

Advertisement

ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಡ್ಡಯನ ಸಮಯಕ್ಕೆ ಮೊದಲೇ ಆಗಮಿಸಿ ಸಂಬಂಧಿತ ವೀಡಿಯೋಗಳನ್ನು ಹಾಗೂಭಿತ್ತಿಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ವೀಕ್ಷಕ ವಿವರಣೆ ಯೊಂದಿಗೆ ಉಡ್ಡಯನದ ಆರಂಭವಾದಾಗ ಎಲ್ಲರೂ ಆಸಕ್ತಿಯಿಂದ ಸಂಬಂಧಿತ ಮಾಹಿತಿಗಳನ್ನು ಕೇಳುತ್ತಾ ಆದಿತ್ಯ -ಎಲ್‌ 1 ಹೊತ್ತ ನಭಕ್ಕೆ ಚಿಮ್ಮುವ ದೃಶ್ಯವನ್ನು ಕಣ್ತುಂಬಿಕೊಂಡರಲ್ಲದೆ ವಿಜ್ಞಾನಿಗಳ ಸಾಧನೆಗೆ ಹರ್ಷೋ ದ್ಗಾರದೊಂದಿಗೆ ಪ್ರತಿ ಹಂತದಲ್ಲೂ ಚಪ್ಪಾಳೆ ಮೂಲಕ ಮೆಚ್ಚುಗೆ ಸೂಚಿಸಿದರು.

ಸಾರ್ವಜನಿಕರು ದೂರದರ್ಶಕದ ಮೂಲಕ ಸೂರ್ಯನ ಕಲೆಗಳ ವೀಕ್ಷಣೆಗೆ ಮಾಡಿದ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡರು.

ವಿದ್ಯಾರ್ಥಿಗಳಿಗೆ ಆದಿತ್ಯ -ಎಲ್‌ 1 ವಿಷಯ ಸಂಬಂಧಿ ರಸಪ್ರಶ್ನೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಭಿತ್ತಿಪತ್ರ ಪ್ರದರ್ಶನದ ವಿವರಣೆ, ರಸಪ್ರಶ್ನೆ ಸ್ಪರ್ಧೆ ಹಾಗೂ ದೂರದರ್ಶಕದ ಮೂಲಕ ಸೂರ್ಯ ವೀಕ್ಷಣೆಗಳಿಗೆ ಕೇಂದ್ರದ ಕ್ಯುರೇಟರ್‌ ಜಗನ್ನಾಥ್‌, ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್‌, ಶೈಕ್ಷಣಿಕ ಸಹಾಯಕ ಶರಣಯ್ಯ ಹಾಗೂ ಇತರ ಸಿಬಂದಿ ಸಹಕರಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next