Advertisement

ಫೇಸ್‌ಬುಕ್‌ನಲ್ಲಿ ಅಂಗಾಂಗ ಮಾರಾಟ!

12:18 PM Aug 20, 2022 | Team Udayavani |

ಪೆನ್ಸೆಲ್ವೇನಿಯಾ: ಫೇಸ್‌ಬುಕ್‌ ಮೂಲಕ ಮಾನವ ದೇಹದ ಭಾಗಗಳನ್ನು ಮಾರಾಟ ಮತ್ತು ಖರೀದಿಸಲು ಪ್ರಯತ್ನಿಸುತ್ತಿದ್ದಾತನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಪೆನ್ಸೆಲ್ವೇನಿಯಾದ ಜೆರೆಮಿ ಲೀ ಪೌಲ್‌ ಎಂದು ಗುರುತಿಸಲಾಗಿದೆ.

Advertisement

ಬಂಧಿತ ವ್ಯಕ್ತಿ ಅರ್ಕಾನ್ಸಾಸ್‌ ಪ್ರಾಂತ್ಯದಲ್ಲಿ ಇರುವ ಮಹಿಳೆಯ ಮೂಲಕ ದೇಹದ ಭಾಗಗಳನ್ನು ಖರೀದಿಸಲು ಮುಂದಾಗಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಮಾನವ ಅಂಗಾಂಗಗಳು ಅರ್ಕಾನ್ಸಾಸ್‌ ವೈದ್ಯಕೀಯ ಕಾಲೇಜಿನ ಲಿಟಲ್‌ ರಾಕ್‌ ಕ್ಯಾಂಪಸ್‌ನಲ್ಲಿ ಇರುವ ಶವಾಗಾರಕ್ಕೆ ಸೇರಿದ್ದು ಎಂದು ಖಚಿತಪಡಿಸಲಾಗಿದೆ. ಖರೀದಿಸಲು ಹಾಗೂ ಮಾರಾಟ ಮಾಡಲು ನಿರ್ಬಂಧವಿರುವಂಥ ಅಂಗಾಂಗಗಳನ್ನು ಕೂಡ ಆತ ಹೊಂದಿದ್ದ ಎಂದು ಹೇಳಲಾಗಿದೆ.

ಅಂಗಾಂಗಗಳನ್ನು ಇಟ್ಟಿರುವ ಚೀಲಗಳ ಫೋಟೋಗಳನ್ನೂ ಈತ ಫೇಸ್‌ಬುಕ್‌ನಲ್ಲಿ ಅಪ್ಲೋಡ್‌ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next