Advertisement

ರಣ ಬಿಸಿಲಿಗೆ ಜನತೆ ಹೈರಾಣ

03:42 PM Mar 30, 2019 | pallavi |

ಲಿಂಗಸುಗೂರು: ಬೇಸಿಗೆ ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ಸುಡುವ ಬಿಸಿಲಿಗೆ ಜನ ಹೊರಬರಲು ಕೂಡ ಹೆದರುವಂತಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಜನ ಉದ್ಯಾನವನ, ಇತರೆಡೆಯ ಬೃಹತ್‌ ಮರಗಳ ನೆರಳಿನ ಆಸರೆ ಪಡೆಯುತ್ತಿರುವುದು ಕಂಡುಬರುತ್ತಿದೆ. ಇನ್ನು ಬಿಸಿಲಲ್ಲಿ ದಾಹ ತಣಿಸಿಕೊಳ್ಳಲು ತಂಪು ಪಾನೀಯ, ನೀರಿನಂಶವಿರುವ ಹಣ್ಣಗಳನ್ನು ಸೇವಿಸುತ್ತಿದ್ದಾರೆ.

Advertisement

ಪಟ್ಟಣದ ಪಾದಚಾರಿ ರಸ್ತೆ, ಜನರು ಸೇರುವ ಪ್ರದೇಶ, ಮರಗಳಡಿ ತಂಪು ಪಾನೀಯದ ಅಂಗಡಿಗಳು ತಲೆ ಎತ್ತಿವೆ. ಪದವಿಪೂರ್ವ ಕಾಲೇಜು ಮುಂಭಾಗದ ಮುದಗಲ್‌ ಮುಖ್ಯರಸ್ತೆ, ಬೈಪಾಸ್‌ ರಸ್ತೆ, ರಾಯಚೂರು ರಸ್ತೆ, ಬಸವಸಾಗರ ವೃತ್ತ, ಗಡಿಯಾರ ವೃತ್ತ, ಹಳೆ ಬಸ್‌ ನಿಲ್ದಾಣ, ಸಹಾಯಕ ಆಯುಕ್ತರ ಕಚೇರಿ, ಪ್ರವಾಸಿ ಮಂದಿರದ ವೃತ್ತ, ಬಿಇಒ ಕಚೇರಿ ಬಳಿ ತಂಪು ಪಾನೀಯ ಹಾಗೂ ಕಲ್ಲಂಗಡಿ, ಕರಬೂಜ್‌ ಹಣ್ಣುಗಳ ಅಂಗಡಿಗಳಲ್ಲಿ ವಹಿವಾಟು ಜೋರಾಗಿದೆ. ಪಟ್ಟಣಕ್ಕೆ ಕಾರ್ಯ ನಿಮಿತ್ತ ಬಂದ ಜನರು ಬಿಸಿಲಿನಲ್ಲಿ ಅಲೆದಾಡಿ ಸುಸ್ತಾಗಿ ಕಲ್ಲಂಗಡಿ, ಕರಬೂಜ, ತಂಪು ಪಾನೀಯ ಸೇವನೆಗೆ ಮುಂದಾಗುತ್ತಿದ್ದಾರೆ.

ಸೇಬು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಕರಿದ್ರಾಕ್ಷಿ, ಮೋಸಂಬಿ, ಪೈನಾಪಲ್‌, ದಾಳಿಂಬೆ, ಬಾಳೆಹಣ್ಣು ಸೇರಿ ಇತರೆ ಹಣ್ಣಿನ ರಸಗಳು, ಎಳನೀರು, ಕಬ್ಬಿನ ಹಾಲು, ಸೋಡಾ, ಶರಬತ್‌, ಮಜ್ಜಿಗೆ, ಲಸ್ಸಿ, ರಾಗಿ ಶರಬತ್‌ ಸೇರಿದಂತೆ ದೇಶಿ ಪಾನೀಯಗಳ ಸೇವನೆ ಮಾಡುತ್ತಿದ್ದಾರೆ.

ಎಳನೀರು ಬೆಲೆ ಗಗನಮುಖೀಯಾಗಿದೆ. ಒಂದು ಎಳನೀರು ಕಾಯಿಗೆ 35-40 ರೂಪಾಯಿ ದರ ಇದೆ. ಮಾರ್ಚ್‌ ಕೊನೆ ವಾರಕ್ಕೇ ಬಿಸಿಲಿನ ತಾಪಮಾನ 38ರಿಂದ 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಬಿಸಿಲ ತಾಪಕ್ಕೆ ಜನ ಮನೆಯಿಂದ ಹೊರಬರದಂತಾಗುತ್ತಿದ್ದು, ಮಧ್ಯಾಹ್ನ ಕೆಲ ರಸ್ತೆಗಳು ಬಿಕೋ ಎನ್ನುತ್ತಿವೆ. ಮಧ್ಯಾಹ್ನ 12ರ ಒಳಗೆ ಕೆಲಸ ಮುಗಿಸಿಕೊಂಡು ಮನೆ ಸೇರುತ್ತಿದ್ದಾರೆ.

ಮತ್ತೇ ಸಂಜೆ ರಸ್ತೆಗೆ ಇಳಿಯುತ್ತಿದ್ದಾರೆ. ಇನ್ನು ಹಳ್ಳಿಗಳಲ್ಲಿ ಜನರು ಮರದ ನೆರಳಿನ ಆಸರೆ, ಗ್ರಾಮದ ಗುಡಿ-ಗುಂಡಾರಗಳಲ್ಲಿ ಕಾಲ ಕಳೆಯುವಂತಾಗಿದೆ. ಪಟ್ಟಣಕ್ಕೆ ಕಾರ್ಯನಿಮಿತ್ತ ಬಂದ ಗ್ರಾಮೀಣ ಜನರು ಬಿಸಿಲಿನಿಂದ ಬಸವಳಿದು ಪಟ್ಟಣದ ಪೊಲೀಸ್‌ ಠಾಣೆ ಎದುರಿನ ಉದ್ಯಾನವನ, ಎಸ್‌ಬಿಐ ಬಳಿಯ ಉದ್ಯಾನದ ಮರಗಳ ನೆರಳಿನಡಿ ವಿಶ್ರಾಂತಿ ಪಡೆಯುತ್ತಿದ್ದಾರೆ

Advertisement

ಪ್ರಯಾಣಿಕರ ಪರದಾಟ ಬೇಸಿಗೆಯಲ್ಲಿ ಪಟ್ಟಣದ ಸಂಘ-ಸಂಸ್ಥೆಗಳು ಸಾರ್ವಜನಿಕರಿಗಾಗಿ ನೀರಿನ ಅರವಟಿಗೆ ಆರಂಭಿಸುತ್ತಿದ್ದರು. ಆದರೆ ಪ್ರಸಕ್ತ ವರ್ಷ ಎಲ್ಲಿಯೂ ಅರವಟಿಗೆ ಆರಂಭಿಸಿಲ್ಲ. ಇದರಿಂದ ಬಾಯಾರಿ ಬಂದ ಜನರಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ. ಇನ್ನು ಬಸ್‌ ನಿಲ್ದಾಣದಲ್ಲೂ ಕುಡಿಯುವ ನೀರಿನ ಸೌಕರ್ಯವಿಲ್ಲದ್ದರಿಂದ ಪ್ರಯಾಣಿಕರ ಪರದಾಟ ಹೇಳ ತೀರದಾಗಿ¨

ಎಲ್ಲೆಡೆ ಭೀಕರ ಬರ ಆವರಿಸಿದೆ. ಬಿಸಿಲಿನ ಝಳ ಊಹೆಗೆ ನಿಲುಕದಷ್ಟು ಪ್ರಖರಗೊಳುತ್ತಿದೆ. ಮಧ್ಯಾಹ್ನ ಜನ ಹೊರ ಬರದಂತಾಗಿದೆ. ಬಿಸಿಲು ಹೆಚ್ಚಾದಂತೆ ಅನಾರೋಗ್ಯದ ಸಮಸ್ಯೆ ಕಾಡಲಿದೆ.
ಮಾರುತಿ ನೆಲೋಗಿ, ಕುಪ್ಪಿಗುಡ್ಡ.

Advertisement

Udayavani is now on Telegram. Click here to join our channel and stay updated with the latest news.

Next