Advertisement

ಜನರ ಒಡನಾಟ ಸಂತಸ ತಂದಿದೆ: ಮೈಸೂರು ಒಡೆಯರ್‌

06:40 AM Mar 10, 2018 | |

ಹೆಬ್ರಿ: ಜನರ ಒಡನಾಟ ನನಗೆ ಸಂತಸ ತಂದಿದೆ. ಮೈಸೂರನ್ನು ಸಾಂಸ್ಕೃತಿಕ ನಗರಿ ಎನ್ನುವ ಹಾಗೆಯೇ ದಕ್ಷಿಣ ಕರಾವಳಿ ಭಾಗದ ಸಂಸ್ಕೃತಿ, ಸಂಪ್ರದಾಯ ಸಾಂಸ್ಕೃತಿಕ ವೈಭವ ಹಾಗೂ ತಿಂಗಳೆಯ ಪ್ರಕೃತಿ ಸೌಂದರ್ಯ ಶ್ಲಾಘ
ನೀಯ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಹೇಳಿದರು.

Advertisement

ಅವರು ಮಾ. 8ರಂದು ತಿಂಗಳೆಯಲ್ಲಿ ನಡೆದ ತಿಂಗಳೆ ಗರಡಿಯ 57ನೇ ಧರ್ಮ, ಕಲೆ ಮತ್ತು ಸಾಹಿತ್ಯೋತ್ಸವದ ವಿದ್ವತ್‌ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಿಂಗಳೆ ಪ್ರತಿಷ್ಠಾನದ ವತಿಯಿಂದ ಸಮ್ಮಾನ ಸ್ವೀಕರಿಸಿ ತಿಂಗಳೆ ಪ್ರತಿಷ್ಠಾನದಿಂದ ಪ್ರಕಟಿತ ಧರ್ಮ ಚಾವಡಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಡಾ| ಬನ್ನಂಜೆ ಗೋವಿಂದಾಚಾರ್ಯ ಅವರು ಈ ಕಾರ್ಯಕ್ರಮದಲ್ಲಿ 42ನೇ ಉಪನ್ಯಾಸ ನೀಡಿದರು. ಡಾ| ವೀಣಾ ಬನ್ನಂಜೆ ಬದುಕಿನ ಒಳನೋಟ ಕುರಿತು ಉಪನ್ಯಾಸ ನೀಡಿದರು.

ತಿಂಗಳೆ ಪ್ರಶಸ್ತಿ ಪ್ರದಾನ
ಪ್ರತಿಷ್ಠಿತ ತಿಂಗಳೆ ಪ್ರಶಸ್ತಿಯನ್ನು ಸ್ವೀಕರಿಸಿದ ಮೂಡಬಿದಿರೆಯ ಡಾ| ಮೋಹನ್‌ ಆಳ್ವ ಮಾತನಾಡಿ, ಸೌಂದರ್ಯದ ಪ್ರಜ್ಞೆ ಇದ್ದಾಗ ಮಾತ್ರ ಇಂತಹ ಕಾರ್ಯ ಮಾಡಲು ಸಾಧ್ಯ ಎಂದರು.ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ತಿಂಗಳೆಯಲ್ಲಿ ದೈವಗಳ ಆರಾಧನೆಯ ಜತೆಗೆ ಸಾಹಿತ್ಯದ ಆರಾಧನೆ ನಡೆಯುತ್ತಿರು ವುದು ಇತರರಿಗೆ ಮಾದರಿ ಎಂದರು.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾದ ಅಮೋಘ ಹೆಗ್ಡೆ,ಅಥರ್ವ ಹೆಗ್ಡೆ ಅವರನ್ನು ಮಹಾರಾಜರು ಸಮ್ಮಾನಿಸಿದರು. ಮಹಾರಾಜರನ್ನು ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದಿಂದ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಸಾಹಿತಿ ಅಂಬಾತನಯ ಮುದ್ರಾಡಿ, ಲಾಲಾಜಿ ಮೆಂಡನ್‌, ಸುರೇಶ ಶೆಟ್ಟಿ ಗುರ್ಮೆ, “ಧರ್ಮ ಚಾವಡಿ’ಯ ಸಂಪಾದಕ ಪ್ರೊ| ಹೆರಂಜೆ ಕೃಷ್ಣ ಭಟ್‌, ಡಾ| ಕೆಳಚಾವಡಿ ಅಣ್ಣಪ್ಪ ಶೆಟ್ಟಿ, ತಿಂಗಳೆ ಶೌರಿ ಶೆಟ್ಟಿ, ಕೆಳಚಾವಡಿ ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಸ್ವಾಗತಿಸಿ, ಸೀತಾನದಿ ವಿಠಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಬೈಕಾಡಿ ಸುಪ್ರಸಾದ್‌ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next