ಮಂಡ್ಯ: ಕೊರೊನಾ ನಿಯಂತ್ರಿಸಲು ರಾಜ್ಯಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂಮಂಡ್ಯದಲ್ಲಿ ಪಾಲನೆಯಾಗುತ್ತಿಲ್ಲ. 4ನೇ ದಿನವಾದಶನಿವಾರವೂ ಬೈಕ್, ಕಾರು, ಆಟೋಗಳಲ್ಲಿಎಂದಿನಂತೆ ಸಂಚಾರ ಮುಂದುವರಿದಿತ್ತು.ಕಳೆದ ವಾರ ವಾರಾಂತ್ಯ ಲಾಕ್‌ಡೌನ್‌ಗೆ ಸಿಕ್ಕಬೆಂಬಲ ಮಂಡ್ಯ ನಗರ ನಂತರ ಸರ್ಕಾರಘೋಷಿಸಿದ ಲಾಕ್‌ಡೌನ್‌ಗೆ ಸಿಗುತ್ತಿಲ್ಲ.ಅನಗತ್ಯವಾಗಿ ಎಂದಿನಂತೆ ಬೈಕ್, ಆಟೋ, ಕಾರುಸಂಚರಿಸುತ್ತಿವೆ.
ಒನ್ ವೇ ರಸ್ತೆ: ನಗರದಲ್ಲಿ ಜನರ ಸಂಚಾರತಡೆಗಟ್ಟಲು ಹಾಗೂ ವಾಹನ ತಪಾಸಣೆ ಮಾಡಲುಪೊಲೀಸರು ಪ್ರಮುಖ ರಸ್ತೆಗಳನ್ನು ಒನ್ ವೇಮಾಡಿದ್ದಾರೆ. ಆದರೆ, ಅಲ್ಲಿಯೂ ಸರಿಯಾಗಿತಪಾಸಣೆ ನಡೆಯುತ್ತಿಲ್ಲ. ಅನಗತ್ಯವಾಗಿಓಡಾಡುತ್ತಿದ್ದರೂ ಸುಮ್ಮನಿರುತ್ತಾರೆ. ಹೆದ್ದಾರಿಗಳಲ್ಲಿತಪಾಸಣೆ ಬಿಟ್ಟರೆ ಉಳಿದ ರಸ್ತೆಗಳಲ್ಲಿ ತಪಾಸಣೆಇಲ್ಲದಂತಾಗಿದೆ.
ಎಂದಿನಂತೆ ಅಂಗಡಿ ಬಂದ್: ಎಂದಿನಿಂದ ಬೆಳಗ್ಗೆ10 ಗಂಟೆ ನಂತರ ಅಂಗಡಿ, ವಾಣಿಜ್ಯ ಮಳಿಗೆಬಂದ್ ಆಗುತ್ತಿವೆ. ಮಾಲೀಕರೂ ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಸಹಕರಿಸುತ್ತಿದ್ದಾರೆ.ನಗರದ ಪ್ರಮುಖ ವ್ಯಾಪಾರ ವಹಿವಾಟುಸ್ತಬ್ಧಗೊಂಡಿದೆ. ಕೊರೊನಾದಿಂದ ಲಾಕ್‌ಡೌನ್‌ಆಗಿರುವ ಹಿನ್ನೆಲೆ ವ್ಯಾಪಾರ-ವಹಿವಾಟು ಇಲ್ಲದೆಪ್ರತಿನಿತ್ಯ ಕೋಟ್ಯಂತರ ರೂ. ನಷ್ಟವಾಗುತ್ತಿದೆ.ಇದರಿಂದ ಮಂಡ್ಯ ಜಿಲ್ಲೆಯ ಆರ್ಥಿಕತೆ ಮೇಲೆಹೊಡೆತ ಬಿದ್ದಿದೆ ಎಂದು ಅಂಗಡಿ ಮಾಲೀಕರೊಬ್ಬರುತಿಳಿಸಿದರು.
ಸಂತೆಯಂತಾದ ಮಾರುಕಟ್ಟೆ: ಪ್ರತಿನಿತ್ಯ ಬೆಳಗ್ಗೆ6ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆಅವಕಾಶ ನೀಡಲಾಗಿದೆ. ಆದರೆ ಈ ಸಂದರ್ಭದಲ್ಲಿಮಾರುಕಟ್ಟೆಗಳು ಸಂತೆಯಂತಾಗುತ್ತಿವೆ. ಸಾಮಾಜಿಕಅಂತರ ಕಾಪಾಡುತ್ತಿಲ್ಲ. ಕೆಲವರು ಮಾಸ್ಕ್ ಧರಿಸದೆಖರೀದಿಗೆ ಮುಂದಾಗಿದ್ದರು. ಅಂಗಡಿಗಳ ಮುಂದೆಸಾಮಾಜಿಕ ಅಂತರವಿಲ್ಲದೆ, ಕೊರೊನಾ ಸೋಂಕಿನಭಯವೂ ಇಲ್ಲದಂತೆ ಸಾರ್ವಜನಿಕರುವರ್ತಿಸುತ್ತಿದ್ದಾರೆ. ವಾರಾಂತ್ಯ ಶನಿವಾರ ಹಾಗೂಭಾನುವಾರ ನಿಗದಿ ಮಾಡಿರುವ ಮಾರುಕಟ್ಟೆಗಳುಜನರಿಂದ ತುಂಬಿ ಹೋಗುತ್ತಿವೆ.