ಮಂಗಳೂರು: ಮಂಗಳೂರು ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿ ವತಿಯಿಂದ ನಿಧಿ ಆಪ್‌ಕೇ ನಿಕಟ್ ಪಿಂಚಣಿ ಅದಾಲತ್ ಕಾರ್ಯಕ್ರಮವು ಫೆ. 10ರಂದು ಭವಿಷ್ಯ ನಿಧಿ ಕಚೇರಿಯಲ್ಲಿ ನಡೆಯಲಿದೆ.
ಬೆಳಗ್ಗೆ 11ರಿಂದ 12 ವರೆಗೆ ಭವಿಷ್ಯ ನಿಧಿ ಸದಸ್ಯರು, ಉದ್ಯೋಗದಾತರು, ಹಾಗೂ 12ರಿಂದ 1ರ ವರೆಗೆ ಪಿಂಚಣಿದಾರರು ಇದರಲ್ಲಿ ಪಾಲ್ಗೊಳ್ಳಬಹುದು.
ಅಹವಾಲುಗಳನ್ನು ಇಮೇಲ್ ಮೂಲಕ r.o.mangalore@epfindia.gov.in ಅಥವಾ ನೇರವಾಗಿ ಮಂಗಳೂರಿನ ಹೈಲ್ಯಾಂಡ್ಸ್ ಬಳಿ ಸಿಲ್ವ ರಸ್ತೆಯಲ್ಲಿರುವ ಭವಿಷ್ಯನಿಧಿ ಕಚೇರಿಗೆ ತಲಪಿಸಬಹುದು.
ಡಿಜಿಟಲ್ ಜೀವಿತ ಪ್ರಮಾಣಪತ್ರ ವನ್ನು ವರ್ಷದ ಯಾವುದೇ ತಿಂಗಳಲ್ಲೂ ಸಲ್ಲಿಸಬಹುದು ಹಾಗೂ ಇದು ಒಂದು ವರ್ಷ ಕಾಲ ಮಾನ್ಯವಾಗಿರುತ್ತದೆ. ಜೀವನ್ ಪ್ರಮಾಣ್ ಫೇಸ್ ರೆಕಗ್ನಿಶನ್ ಆಪ್ ಬಳಸಿಕೊಂಡು ಸ್ಮಾರ್ಟ್ ಫೋನಿನಲ್ಲಿ ಕೂಡ ಪಿಂಚಣಿದಾರರು ಪ್ರಮಾಣ ಪತ್ರ ಸಲ್ಲಿಸಬಹುದು.