ಬೇಲೂರು: ವಿದ್ಯಾರ್ಥಿಯೊಬ್ಬನು ಶಿವ, ಸುಭಾಷ ಚಂದ್ರ ಬೋಸ್, ಪುನೀತ್, ಉಪೇಂದ್ರ, ದರ್ಶನ್ ಸೇರಿದಂತೆ ಹಲವರು ವ್ಯಕ್ತಿಗಳ ಭಾವಚಿತ್ರವನ್ನು ಪೆನ್ಸಿಲ್ ನಿಂದ ರಚಿಸಿ ತನ್ನ ಚಿತ್ರಕಲಾ ಪ್ರೌಢಿಮೆ ಮೆರೆದಿದ್ದಾನೆ.
ಚಿಕ್ಕಂದಿನಿಂದಲೇ ಹವ್ಯಾಸಕ್ಕಾಗಿ ಪೆನ್ಸಿಲ್ ಹಿಡಿದುಗೀಚುತ್ತಿದ್ದ ವಿದ್ಯಾರ್ಥಿ ಬಿ.ಆರ್.ಪ್ರಜ್ವಲ್, ಇಲ್ಲಿನ ಕೆಂಪೇಗೌಡರ ರಸ್ತೆಯಲ್ಲಿರುವ ಎಪಿಎಂಸಿ ಮಾಜಿ ಸದಸ್ಯ ಪೈಂಟ್ ರವಿ ಅವರ ಪುತ್ರ.ಹಾಸನದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ಈ ಚಿತ್ರಗಳ ರಚಿಸಿದ್ದಾನೆ. ಭಾವಚಿತ್ರ ರಚನೆಯ ಇದು ಆರಂಭವಾದರೂ ನೋಡುಗರ ಮೆಚ್ಚುಗೆಗೆ ಪಾತ್ರನಾಗಿದ್ದು, ಭವಿಷ್ಯದಲ್ಲಿ ಈ ಯುವ ಪ್ರತಿಭೆ ಏನನ್ನಾದರೂ ಸಾಧಿಸಬಲ್ಲ ಎನ್ನುವ ಭಾವನೆ ವ್ಯಕ್ತವಾಗುತ್ತದೆ.
ಇದನ್ನೂ ಓದಿ;- ಶಾರುಖ್ ಪುತ್ರನಿಗೆ ಧೈರ್ಯ ತುಂಬಿದ ನಟ ಹೃತಿಕ್ ರೋಷನ್
ಈತನ ತಂದೆ ಪೈಂಟ್ ರವಿ ಕೂಡ ಹಲವಾರು ಬ್ಯಾನರ್ ಹಾಗೂ ಚಿತ್ರಗಳನ್ನು ಬರೆಯುವಲ್ಲಿ ನಿಪುಣರಾಗಿದ್ದಾರೆ. ಅಂತಾರಾಷ್ಟ್ರೀಯ, ಚಿತ್ರಕಲಾ ಪ್ರಶಸ್ತಿ ವಿಜೇತ ಶಿಕ್ಷಕ ಬೇಲೂರಿನ ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಅದ್ಭುತ ಪ್ರತಿಭೆ ಹೊರ ಹೊಮ್ಮಿಸಿದ್ದಾನೆ.
ಪೆನ್ಸಿಲ್ನಿಂದ ರಚಿಸುವ ಚಿತ್ರಗಳು ಭಾವಚಿತ್ರವಾಗಲಿದ್ದು, ಭವಿಷ್ಯದಲ್ಲಿ ಒಂದಿಷ್ಟು ತರಬೇತಿ ಪಡೆದಲ್ಲಿ ಚಿತ್ರಕಲಾ ರಂಗದಲ್ಲಿ ಸಾಧನೆ ಮಾಡುವ ಅಗಾಧತೆ ಈ ವಿದ್ಯಾರ್ಥಿಯಲ್ಲಿದೆ ಎಂದರು. ಅತಿ ಚಿಕ್ಕ ವಯಸ್ಸಿನಲ್ಲಿ ಯಾವುದೇ ತರಬೇತಿ ಪಡೆಯದೆ ಚಿತ್ರ ರಚನೆಯಲ್ಲಿ ತೊಡಗಿರುವ ಪ್ರಜ್ವಲ್ ಉತ್ತಮ ಚಿತ್ರಕಾರನಾಗಲಿ ಎಂಬುದು ಜನತೆಯ ಆಶಯವಾಗಿದೆ.