Advertisement

ಮಾಸ್ಕ್ ಧರಿಸದವರಿಗೆ ದಂಡಾಧಿಕಾರಿ ದಂಡ

10:30 AM Jul 03, 2021 | Team Udayavani |

ಹರಪನಹಳ್ಳಿ: ಪಟ್ಟಣದ ಎಲ್ಲೆಡೆ ಸಾರ್ವಜನಿಕರು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಪಾಲನೆ ಮಾಡದೇ ಸಂಚರಿಸುತ್ತಿದ್ದು, ಕೋವಿಡ್‌-19 ಇಲ್ಲವೆ ಇಲ್ಲ ಎಂಬಂತೆ ವರ್ತನೆ ತೋರುವವರಿಗೆ ಖುದ್ದು ತಹಶೀಲ್ದಾರ್‌ ಎಲ್‌.ಎಂ.ನಂದೀಶ್‌ ಶುಕ್ರವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಲಾಟಿ ಹಿಡಿದು ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಸ್ಥಳದಲ್ಲೇ ದಂಡ ವಿಧಿಸಿ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹೋಗಿದೆ ಎಂದು ಭಾವಿಸಿ ಜನರುಮಾಸ್ಕ್ ಧರಿಸದೆ, ಸಾಮಾಜಿಕಅಂತರ ಪಾಲನೆ ಮಾಡದೆ ಗುಂಪು ಗೂಡುವುದು, ಸಂಚರಿಸುವುದು ಸಾಮಾನ್ಯವಾಗುತ್ತಿದೆ. ಈ ರೀತಿಯ ಭಾವನೆ ಸಾರ್ವಜನಿಕರಲ್ಲಿದ್ದರೆ ಕೊರೊನಾದ ಮೂರನೇ ಅಲೆ ಎದುರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಕೊರೊನಾ ಬಗ್ಗೆ ನಾವು ಏಷ್ಟೇ ಜಾಗೃತಿ, ತಿಳಿವಳಿಕೆ ನೀಡಿದರೂಕೆಲವರ ಮನೋಭಾವ ಬದಲಾಗದೆ ಉದಾಸೀನತೆ ತೋರುವವರಿಗೆ ದಂಡ ವಿಧಿಸಿ ಎಚ್ಚರಿಸಲಾಯಿತು ಎಂದು ತಿಳಿಸಿದರು.

ಸಾರ್ವಜನಿಕರು ಸರ್ಕಾರದ ಕೋವಿಡ್‌ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಪ್ರತಿಯೊಬ್ಬರೂ ಕಡ್ಡಾಯವಾಗಿ ಕೊರಾನಾ ಲಸಿಕೆ ಹಾಕಿಸಿಕೊಂಡು ಮೂರನೇ ಅಲೆ ಎದರಿಸಲು ಸಿದ್ಧರಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್‌ ನಾಯ್ಕ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್‌, ಸ್ಥಳೀಯ ಬಿಜೆಪಿ ಮುಖಂಡ ಸಣ್ಣ ಹಾಲಪ್ಪ ಪುರಸಭೆ ಮತ್ತು ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next