ಲಂಡನ್: ತನ್ನ ಬಾಸ್ ವಿರುದ್ಧ ಆಧಾರರಹಿತ ಲೈಂಗಿಕ ಶೋಷಣೆ ಆರೋಪ ಮಾಡಿದ ಮಹಿಳಾ ಟೆಕಿಗೆ ಲಂಡನ್ ನ್ಯಾಯಾಲಯ ದಂಡ ವಿಧಿಸಿದೆ ಘಟನೆ ವರದಿಯಾಗಿದೆ. ಕಚೇರಿ ವ್ಯವಸ್ಥಾಪಕ ತನಗೆ ಕಳುಹಿಸಿದ್ದ ಅಧಿಕೃತ ಇ-ಮೇಲ್‌ನಲ್ಲಿ “ಎಕ್ಸ್‌ಎಕ್ಸ್” ಎಂದು ನಮೂದಿಸಿದ್ದಾರೆ. ಈ ಮೂಲಕ ತನಗೆ ಮುತ್ತು ನೀಡುವಂತೆ ಹಾಗೂ ಲೈಂಗಿಕವಾಗಿ ಸಹಕರಿಸುವಂತೆ ಪರೋಕ್ಷವಾಗಿ ಹೇಳಿದ್ದಾರೆ ಎಂದು ಆರೋಪಿಸಿ ಮಹಿಳಾ ಉದ್ಯೋಗಿಯು ವ್ಯವಸ್ಥಾಪಕನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಕಾಗದರಹಿತ ಉದ್ಯಮ ಸಲಹೆಗಳನ್ನು ಒದಗಿಸುವ “ಎಸ್‌ಡಾಕ್ಸ್” ಕಂಪನಿಯ ಲಂಡನ್ ಕಚೇರಿಯ ವ್ಯವಸ್ಥಾಪಕ ಅಲೆಕ್ಸಾಂಡರ್ ಗೌಲಾಂಡ್ರಿಸ್ ವಿರುದ್ಧ ಪ್ರಾಜೆಕ್ಟ್ ಮ್ಯಾನೇಜರ್ ಕರೀನಾ ಗ್ಯಾಸ್ಟರೋವಾ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಎರಡೂ ಕಡೆಯ ವಾದ ಆಲಿಸಿದ ಸ್ಥಳೀಯ ನ್ಯಾಯಾಲಯ, ಮಹಿಳೆ ಆರೋಪಿಸಿರುವ ಅಂಶಗಳಿಗೆ ಅಗತ್ಯ ಪುರಾವೆಗಳಿಲ್ಲ. ಅತಿಯಾದ ಚಿಂತನೆಯಿಂದ ಯಾವುದೇ ಆಧಾರವಿಲ್ಲದ ಆರೋಪಗಳನ್ನು ಮಹಿಳೆ ಮಾಡಿದ್ದಾರೆ ಎಂದು ಹೇಳಿದೆ. ಮಹಿಳೆಗೆ ದಂಡವಾಗಿ 5,000 ಪೌಂಡ್‌ಗಳನ್ನು ವಿಧಿಸಿ, “ಎಸ್‌ಡಾಕ್ಸ್’ ಕಂಪನಿಗೆ ಇದನ್ನು ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.