Advertisement

ಕೋವಿಡ್‌ ಮಾರ್ಗಸೂಚಿ ಪಾಲಿಸದಿದ್ದರೆ ದಂಡ ಹಾಕಿ

06:27 AM Jul 11, 2020 | Lakshmi GovindaRaj |

ಚಿಂತಾಮಣಿ: ಕೋವಿಡ್‌ 19 ವೈರಸ್‌ ಹರಡದಂತೆ ತಡಗೆಟ್ಟುವ ನಿಟ್ಟಿನಲ್ಲಿ ಪ್ರತಿ ಯೊಬ್ಬರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾ ಗಬೇಕು. ಮಾಸ್ಕ್ ಹಾಕದೇ ಹಾಗೂ ಅಂಗಡಿ ಗಳ ಬಳಿ ಸಾಮಾಜಿಕ ಅಂತರ  ಕಾಪಾಡಿ ಕೊಳ್ಳದ ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ದಂಡ ಹಾಕುವಂತೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರ ಹಾಗೂ ತಾಲೂಕಿನಾದ್ಯಂತಹ ದಿನೇ ದಿನೆ ಕೋವಿಡ್‌ 19 ಪ್ರಕರಣಗಳು  ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಚಿಂತಾಮಣಿ ನಗರ ಹಾಗೂ ತಾಲೂಕಿನಾದ್ಯಂತಹ ಕೋವಿಡ್‌ 19  ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಆರೋಗ್ಯ ಇಲಾಖೆ ಯವರು ಕೋವಿಡ್‌ 19 ಟೆಸ್ಟ್‌ ಮಾಡಿಸಿಕೊಳ್ಳಲು ಬರುವವರಿಗೆ, ವರದಿ ಬರುವವರೆಗೂ ಅವರಿಗೆ ಎಲ್ಲೂ ಮನೆಯಲ್ಲಿ ಇರುವಂತೆ ತಿಳಿಸಬೇಕು.

ಕ್ವಾರಂಟೈನ್‌ ಮಾಡಿರು  ವವರಿಗೆ ಅಗತ್ಯ ಸೌಲಭ್ಯ ಒದಗಿಸಲು ಮುಂದಾಗ ಬೇಕೆಂದರು. ಒಬ್ಬ ವ್ಯಕ್ತಿಗೆ ಒಂದು ಬಾರಿ ಪಾಸಿಟಿವ್‌ ಬಂದ ನಂತರ ಮತ್ತೂಂದು ಬಾರಿ ಟೆಸ್ಟ್‌ ಗೆ ಅವಕಾಶ ನೀಡಬಾರದು. ಅಂತಹ ವರನ್ನು ಕೋವಿಡ್‌ ಜಿಲ್ಲಾಸ್ಪತ್ರೆಗೆ ಸಾಗಿಸಬೇ ಕೆಂದರು.  ತಹಶೀಲ್ದಾರ್‌ ಹನುಮಂತ ರಾಯಪ್ಪ, ಕೋವಿಡ್‌ 19 ನೋಡಲ್‌ ಅಧಿಕಾರಿ ಪ್ರಸಾದ್‌, ಡಿವೈಎಸ್ಪಿ ಶ್ರೀನಿವಾಸ್‌, ಇಒ ಮಂಜುನಾಥ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ನಗರ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕ ಆನಂದಕುಮಾರ್‌,  ಗ್ರಾಮಾಂತರ ಠಾಣೆಯ ಸಿಐ ಶ್ರೀನಿವಾಸಪ್ಪ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next