Advertisement

Pen drive ಹಂಚಿಕೆ ಆರೋಪ: ನವೀನ್‌ ಗೌಡ,ಚೇತನ್‌ ಗೌಡಗೆ 14 ದಿನ ನ್ಯಾಯಾಂಗ ಬಂಧನ

08:41 PM Jun 01, 2024 | Team Udayavani |

ಹಾಸನ: ಅಶ್ಲೀಲ ವೀಡಿಯೋಗಳಿದ್ದ ಪೆನ್‌ಡ್ರೈವ್‌ ಹಂಚಿಕೆ ಆರೋಪದಲ್ಲಿ ಎಸ್‌ಐಟಿ ವಶದಲ್ಲಿದ್ದ ಆರೋಪಿಗಳಾದ ನವೀನ್‌ ಗೌಡ ಮತ್ತು ಚೇತನ್‌ ಗೌಡ ಅವರನ್ನು ಹಾಸನದ ನ್ಯಾಯಾಲಯವು ಶನಿವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

Advertisement

ಬೆಂಗಳೂರಿನಲ್ಲಿ ಮೇ 29ರಂದು ನವೀನ್‌ ಗೌಡ ಮತ್ತು ಚೇತನ್‌ ಗೌಡರನ್ನು ಎಸ್‌ಐಟಿ ಬಂಧಿಸಿತ್ತು. ಬಳಿಕ ಹಾಸನಕ್ಕೆ ಕರೆತಂದು ವಿಚಾರಣೆ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಎರಡು ದಿನ ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿತ್ತು. ಕಸ್ಟಡಿ ಅವಧಿ ಮುಗಿದಿದ್ದರಿಂದ ಶನಿವಾರ ಮಧ್ಯಾಹ್ನ ಹಾಸನದ ಹೆಚ್ಚುವರಿ ಹಿರಿಯ ಸಿವಿಲ್‌ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ವಿಧಿಸಲಾಯಿತು.

ಪೆನ್‌ಡ್ರೈವ್‌ಗಳ ಹಂಚಿಕೆಯಲ್ಲಿ ಚೇತನ್‌ ಗೌಡ, ಶರತ್‌, ಪುಟ್ಟರಾಜು, ಕಾರ್ತಿಕ್‌ ಭಾಗಿಯಾಗಿದ್ದಾರೆ ಎಂದು ಜೆಡಿಎಸ್‌ ಮುಖಂಡ, ನ್ಯಾಯವಾದಿ ಪೂರ್ಣಚಂದ್ರ ತೇಜಸ್ವಿ ಎ.23ರಂದು ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next