Advertisement

Pen Drive Case ಪ್ರಜ್ವಲ್‌ಗೆ ಕೇಂದ್ರದಿಂದ ರಕ್ಷಣೆ: ಸಿದ್ದರಾಮಯ್ಯ

12:22 AM May 04, 2024 | Team Udayavani |

ಬಾಗಲಕೋಟೆ: ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಕೇಂದ್ರ ಸರಕಾರವೇ ರಕ್ಷಿಸುತ್ತಿದೆ. ಆದರೆ ಅವರು ಯಾವುದೇ ದೇಶದಲ್ಲಿ ಇದ್ದರೂ ನಾವು ಹಿಡಿದು ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಶಪಥ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಪ್ರಕರಣ ಬಿಜೆಪಿಗೆ ಮೊದಲೇ ಗೊತ್ತಿತ್ತು. ಆದರೂ ಜೆಡಿಎಸ್‌ ಜತೆಗೆ ಹೊಂದಾಣಿಕೆ ಮಾಡಿಕೊಂಡರು. ಪಾಸ್‌ಪೋರ್ಟ್‌ ರದ್ದು ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ. ಇದಕ್ಕಾಗಿ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದರು.

ಚುನಾವಣೆ ಪ್ರಚಾರದ ವೇಳೆ ಪ್ರಜ್ವಲ್‌ ಕೂಡ ನನ್ನ ಮಗ. ನಿಖೀಲ್‌ ಬೇರೆ ಅಲ್ಲ, ಪ್ರಜ್ವಲ್‌ ಬೇರೆ ಅಲ್ಲ. ಅವರನ್ನು ಗೆಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ ಅವರ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಎನ್ನುತ್ತಿದ್ದಾರೆ ಎಂದರು.

ಪ್ರಜ್ವಲ್‌ ರೇವಣ್ಣ ಪ್ರಕರಣದ ಸಂತ್ರಸ್ತ ಮಹಿಳೆ ಎಲ್ಲಿ ಹೋಗಿದ್ದರೂ ಹುಡುಕಿ ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ತನಿಖೆ ವಿಷಯದಲ್ಲಿ ಎಸ್‌ಐಟಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಕುಮಾರಸ್ವಾಮಿ ಅವರ ಅಪ್ಪ ವಕೀಲರನ್ನು ಯಾಕೆ ಮನೆಗೆ ಕರೆಸುತ್ತಿದ್ದಾರೆ. ನಾವು ಬೇರೆ ಬೇರೆ ಆಗಿದ್ದೇವೆ, ಆ ಪ್ರಕರಣಕ್ಕೂ, ದೇವೇಗೌಡರಿಗೂ ಸಂಬಂಧ ಇಲ್ಲ ಎನ್ನುವವರು ಒಟ್ಟಿಗೆ ರಾಜಕೀಯ ಮಾಡುತ್ತಾರೆ. ಕುಕೃತ್ಯ ಮಾಡುವುದೂ ಒಟ್ಟಿಗೆ, ತಪ್ಪು ಮಾಡುವುದೂ ಒಟ್ಟಿಗೆ ಎಂದರು.

ಕೇವಲ ಲೈಂಗಿಕ ದೌರ್ಜನ್ಯವಲ್ಲ
ಪ್ರಜ್ವಲ್‌ ರೇವಣ್ಣ ಕೇವಲ ಲೈಂಗಿಕ ದೌರ್ಜನ್ಯ ಮಾಡಿಲ್ಲ. ಆತನ ವಿರುದ್ಧ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಯಾವುದೇ ಮಹಿಳೆ ಅತ್ಯಾಚಾರ ಆಗಿದೆ ಎಂದು ಸುಳ್ಳು ಹೇಳಲು ಸಾಧ್ಯವಿಲ್ಲ. ಅದು ಅವಳ ಜೀವನದ ಪ್ರಶ್ನೆಯಾಗಿರುತ್ತದೆ. ಅದರಲ್ಲೂ ಮದುವೆಯಾದವರು ಅತ್ಯಾಚಾರ ಆಗಿದೆ ಎಂದು ಬಹಿರಂಗವಾಗಿ ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

Advertisement

ಪ್ರಜ್ವಲ್‌ ರೇವಣ್ಣ ವೀಡಿಯೋ ಬಗ್ಗೆ ಗೊತ್ತಿದ್ದರೂ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಅವರ ವೀಸಾ ರದ್ದು ಮಾಡಿ ಎಂದು ಪತ್ರ ಬರೆದರೂ ಇನ್ನೂ ಕೇಂದ್ರ ಸರಕಾರ ಕ್ರಮ ಕೈಗೊಂಡಿಲ್ಲ. ಹೀಗಾಗಿ ಪರೋಕ್ಷವಾಗಿ ಪ್ರಜ್ವಲ್‌ ಅವರನ್ನು ಈ ಪ್ರಕರಣದಲ್ಲಿ ರಕ್ಷಣೆ ಮಾಡುತ್ತಿದ್ದಾರೆ ಎಂದರ್ಥ.
– ಸಿದ್ದರಾಮಯ್ಯ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next