Advertisement
ಪ್ರಜ್ವಲ್ ಹಲವು ಮಹಿಳೆಯರ ಜತೆಗೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಆರೋಪಕ್ಕೆ ಈ ಅಂಶ ಪುಷ್ಟಿ ನೀಡುವಂತಿದೆ.
Related Articles
Advertisement
ಆದರೆ ಪ್ರಜ್ವಲ್ ವಿರುದ್ಧ ದಾಖಲಾಗಿರುವ 5 ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಎಸ್‌ಐಟಿಯು ತನಿಖೆ ನಡೆಸುತ್ತಿದ್ದು ಈ ವೇಳೆ ಇಂತಹ ಕೆಲವು ಸಂಗತಿಗಳು ತನಿಖಾಧಿಕಾರಿಗಳ ಗಮನಕ್ಕೆ ಬಂದಿವೆ ಎನ್ನಲಾಗಿದೆ. ಮತ್ತೂಂದೆಡೆ ಕೆಲವು ಮಹಿಳೆಯರು ತಮ್ಮ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು, ವಿವಿಧ ಆಮಿಷಕ್ಕೊಳಗಾಗಿ ಪ್ರಜ್ವಲ್ ರೇವಣ್ಣ ಜತೆಗೆ ಆತ್ಮೀಯವಾಗಿದ್ದರು. ಪ್ರಜ್ವಲ್ ತಾವು ಕೊಟ್ಟ ಮಾತಿನಂತೆ ಅವರಿಗೆ ಕೆಲವು ಸವಲತ್ತುಗಳನ್ನು ಕಲ್ಪಿಸಿಕೊಟ್ಟಿರುವ ಆರೋಪವೂ ಕೇಳಿ ಬಂದಿದೆ.
ಜೈಲಲ್ಲಿ ಸಹೋದರರುಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ ವಿಶೇಷ ಸೌಲಭ್ಯಗಳಿಲ್ಲದೆ ಸಾಮಾನ್ಯ ಕೈದಿಯಂತೆ ಇದ್ದಾರೆ. ಈ ನಡುವೆ ಸೋಮವಾರ ತಾಯಿ ಭವಾನಿ ರೇವಣ್ಣ ಅವರನ್ನು ಭೇಟಿಯಾದ ಬಳಿಕ ಕೊಂಚ ಸಪ್ಪೆಯಾಗಿದ್ದು ಮೌನಕ್ಕೆ ಶರಣಾಗಿದ್ದಾರೆ. ಬುಧವಾರ ಸೂರಜ್ ರೇವಣ್ಣ ಕಸ್ಟಡಿಗೆ ಪಡೆದ ಅವಧಿ ಮುಕ್ತಾಯಗೊಳ್ಳಲಿದ್ದು, ಸಿಐಡಿಯು ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.