Advertisement

ಶಿಲಾನ್ಯಾಸದಲ್ಲಿ ಭಾಗಿಯಾದದ್ದು ಮಹಾಭಾಗ್ಯ : ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

02:08 AM Jun 02, 2022 | Team Udayavani |

ಅಯೋಧ್ಯೆ: ಭರತ ಖಂಡದಲ್ಲಿ ಮೋಕ್ಷದಾಯಕವಾದವು ಎನ್ನಲಾದ ಸಪ್ತ ಕ್ಷೇತ್ರಗಳಲ್ಲಿ ಮೊದಲನೆಯದು ಎಂದು ಪರಿಗಣಿತ ವಾಗಿರುವ ಅಯೋಧ್ಯೆಯಲ್ಲಿ ಭಾರತೀಯರ ನೂರಾರು ವರ್ಷಗಳ ಕನಸು ಇಂದು ನನಸಾಗಿದೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ಪ್ರಧಾನ ಗರ್ಭಗುಡಿಯ ಶಿಲಾನ್ಯಾಸ ಇಂದು ನಡೆದಿದೆ. ಇದರಲ್ಲಿ ನಾವು ಭಾಗಿಯಾಗಿದ್ದು, ಈ ಅವಕಾಶ ನಮ್ಮ ಬದುಕಿನಲ್ಲಿ ಶ್ರೀರಾಮ, ಶ್ರೀಕೃಷ್ಣ ದೇವರ ಕೃಪೆಯಿಂದಾಗಿ ಲಭಿಸಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಒಬ್ಬರಾಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

Advertisement

ಅಯೋಧೆಯಲ್ಲಿ ಬುಧವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಮಂದಿರ ನಿರ್ಮಾಣಕಾರ್ಯ ಸುಸೂತ್ರವಾಗಿ ನೆರವೇರಲಿ, ನಿಶ್ಚಿತ ದಿನ ಅದು ಪರಿಪೂರ್ಣವಾಗಲಿ ಎಂದು ಈ ಸಂದರ್ಭದಲ್ಲಿ ನಾವು ಶ್ರೀ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದರು.

ಮಂದಿರ ನಿರ್ಮಾಣ ಕಾರ್ಯ ಯೋಜಿಸಿದ ರೀತಿಯಲ್ಲಿ ನಡೆದು 2024ರ ಜನವರಿ ಅಂದರೆ ಮಕರ ಸಂಕ್ರಾಂತಿಯ ಬೆನ್ನಿಗೆ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದರಲ್ಲಿ ಭಾಗಿಯಾಗುವ, ಅದನ್ನು ವೀಕ್ಷಿಸುವ ಮಹಾಭಾಗ್ಯ ಭರತ ಖಂಡದ ಎಲ್ಲರಿಗೆ ಒದಗಿ ಬರಲಿ ಎಂಬುದಾಗಿಯೂ ನಾವು ಶ್ರೀಕೃಷ್ಣ ಮತ್ತು ಶ್ರೀರಾಮ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ ಎಂದೂ ಶ್ರೀಪಾದರು ನುಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next