Advertisement

ಪೆಗಾಸಸ್ : ತನಿಖೆ ನಡೆಸುವಂತೆ ಕೋರಿ ‘ಸುಪ್ರೀಂ’ಗೆ ಅರ್ಜಿ ಸಲ್ಲಿಕೆ

02:36 PM Jul 25, 2021 | Team Udayavani |

ನವ ದೆಹಲಿ : ಪೆಗಾಸಸ್ ಬಳಸಿ ದೇಶದ ಪ್ರಮುಖ ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸಿವ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ದೇಶದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ.

Advertisement

ಪೆಗಾಸಸ್ ತಂತ್ರಾಂಶವನ್ನು ಬಳಸಿ ದೇಶದ ಪ್ರಮುಖ ಪತ್ರಕರ್ತರು, ರಾಜಕೀಯ ಮುಖಂಡರು, ಸರ್ಕಾರಿ ಸಿಬ್ಬಂದಿಗಳನ್ನು ಒಳಗೊಂಡು ಅಂದಾಜು 300 ಭಾರತೀಯರ ಮೇಲೆ ನಿಗಾ ಇರಿಸಲಾಗಿದೆ ಎನ್ನುವುದಾಗಿ ಆದ ವರದಿಗಳ ಮೇಲೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟಾಸ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ : ಓ್ಹ… ಭ್ರಮೆ : ನಿಮಗೆ ಗೊತ್ತಿಲ್ಲದೆ ನೀವು ಒಂದು ಭ್ರಮೆಯಲ್ಲಿದ್ದೀರಿ..!

ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಬ್ರಿಟಾಸ್‌, ಭಾರತೀಯರಲ್ಲಿ ಇದು ಭಾರಿ ಆತಂಕವನ್ನು ಸೃಷ್ಟಿ ಮಾಡಿದೆ. ಸಂವಿಧಾನಕ್ಕೆ ವಿರುದ್ಧವಾಗಿದೆ. ದೇಶದ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಇದು ನಡೆಯುತ್ತಿದೆ. ವಾಕ್ ಸ್ವಾತಂತ್ರಕ್ಕೆ ಹರಣ ಮಾಡುತ್ತದೆ. ಈ ಕುರಿತಾಗಿ ಶೀಗ್ರದಲ್ಲಿ ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಇದೊಂದು ಗಂಭಿರ ವಿಚಾರ, ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕಾಗುವ ವಿಚಾರದಲ್ಲಿ ಮೌನ ತಾಳಿದೆ. ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆಯುತ್ತಿರುವ ಪಿತೂರಿ ಎಂದು ಕೇಂದ್ರ ಹೇಳಿದೆಯಾದರೂ, ಯಾವ ಬಗ್ಗೆ ತನಿಖೆಗೆ ಸರ್ಕಾರ ಸೂಚಿಸಲಿಲ್ಲ. ಮುಂಗಾರು ಅಧಿವೇಶನದಲ್ಲಿಯೂ ಈ ಬಗ್ಗೆ ಪ್ರಸ್ತಾಪ ಆಯಿತು. ಕೇಂದ್ರ ಸರ್ಕಾರ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

Advertisement

ಇದನ್ನೂ ಓದಿ :  ಭ್ರಷ್ಟರನ್ನು ತೆಗೆಯುವ ವಿಧಾನ ಪ್ರಧಾನಿ ಮೋದಿ ,ಅಮಿತ್ ಶಾಗೆ ಗೊತ್ತಿದೆ – ವೀರಪ್ಪ ಮೊಯ್ಲಿ

Advertisement

Udayavani is now on Telegram. Click here to join our channel and stay updated with the latest news.

Next