Advertisement

ಪೆಗಾಸಸ್ ನನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡಿದೆ,ಇದು ನಿಜವಾದ ದೇಶದ್ರೋಹ : ರಾಹುಲ್ ಗುಡುಗು

06:37 PM Jul 23, 2021 | Team Udayavani |

ನವ ದೆಹಲಿ : ಪೆಗಾಸ್ ವಿವಾರವಾಗಿ ಕಾಂಗ್ರೆಸ್ ಹಾಗೂ ಇತರೆ ಪ್ರತಿಪಕ್ಷಗಳು  ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿವೆ.

Advertisement

ಇಂದು(ಶುಕ್ರವಾರ, ಜುಲೈ 23) ಸಂಸತ್ತಿನ ಆವರಣದೊಳಗಿನ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಪೆಗಾಸಸ್ ವಿವಾದದ ವಿರುದ್ಧ ಕಾಂಗ್ರೆಸ್, ಡಿಎಂಕೆ ಮತ್ತು ಶಿವಸೇನೆ ಸಂಸದರು ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್,  ಪೆಗಾಸಸ್ ಸ್ಲೈವೇರ್ ಎನ್ನುವುದು ಇಸ್ರೇಲಿ ಅಸ್ತ್ರ. ಬಿಜೆಪಿ ಭಾರತದ ಸಂಸ್ಥೆಗಳ ವಿರುದ್ಧವಾಗಿ ಪ್ರಯೋಗ ಮಾಡುವುದರ ಮೂಲಕ ಕೆಳ ಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :  ಪೆಗಾಸಸ್ ಪ್ರಕರಣದ ಬಗ್ಗೆ ಕೋರ್ಟ್ ತನಿಖೆ ನಡೆಸಲಿ; ರಾಹುಲ್ ಬೇಡಿಕೆ ತಿರಸ್ಕರಿಸಿದ ಕೇಂದ್ರ

ಇಸ್ರೇಲ್ ಪೆಗಾಸಸ್ ನನ್ನು ಶಸ್ತ್ರಾಸ್ತ್ರವೆಂದು ಪರಿಗಣಿಸಿದೆ. ಭಯೋತ್ಪಾದಕರ ವಿರುದ್ಧ ಪೆಗಾಸಸ್ ನನ್ನು ಬಳಸಲಾಗುತ್ತದೆ ಎಂದು ಹೇಳಿದೆ. ಆದರೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಈ ಅಸ್ತ್ರವನ್ನು ದೇಶದ ರಾಜ್ಯಗಳ ಮೇಲೆ, ದೇಶದ ಸಂಸ್ಥೆಗಳ ಮೇಲೆ, ಮೋದಿ ಹಾಗೂ ಶಾ ಅವರ ನಿಜ ಬಣ್ಣವನ್ನು ಬಯಲು ಮಾಡಿದವರ ಮೇಲೆ ಪ್ರಯೋಗಿಸಿದ್ದಾರೆ ಎಂದು ಗುಡುಗಿದ್ದಾರೆ.

Advertisement

ಪೆಗಾಸಸ್ ನನ್ನು ಕೇಂದ್ರ ಬಿಜೆಪಿ ರಾಜಕೀಯವಾಗಿ ಬಳಸಿದೆ. ಕರ್ನಾಟಕದ ರಾಜಕಾರಣದಲ್ಲಿಯೂ ಅವರು ಈ ಅಸ್ತ್ರವನ್ನು ಬಳಸಿದ್ದಾರೆ. ದೇಶದ ಸರ್ವೋಚ್ಛ ನ್ಯಾಯಾಲಯದ ಮೇಲೂ ಕೂಡ ಈ ಅಸ್ತ್ರವನ್ನು ಪ್ರಯೋಗಿಸಿರುವುದು ಅವರ ಕ್ರಿಮಿನಲ್ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಇದು ನಿಜವಾದ ದೇಶದ್ರೋಹದ ಕೆಲಸ. ಎಂದು ಸಿಡಿದಿದ್ದಾರೆ.

ದಿ ವೈರ್‌ನಲ್ಲಿ ಪ್ರಕಟವಾದ ಪೆಗಾಸಸ್ ಕುರಿತಾದ ಸುದ್ದಿ ಸಂಚಲನ ಸೃಷ್ಟಿಸಿದ ನಂತರ, ಪೆಗಾಸಸ್ ಸ್ಪೈವೇರ್ ಬಳಸುವ ಅಪರಿಚಿತ ಏಜೆನ್ಸಿಯ ಕಣ್ಗಾವಲುಗಾಗಿ ಸಂಭವನೀಯ ಗುರಿಗಳ ಸೋರಿಕೆಯಾದ ಪಟ್ಟಿಯಲ್ಲಿ ಹಲವಾರು ಭಾರತೀಯ ರಾಜಕಾರಣಿಗಳು, ಪತ್ರಕರ್ತರು, ವಕೀಲರು ಮತ್ತು ಕಾರ್ಯಕರ್ತರ ಹೆಸರುಗಳು ಕಾಣಿಸಿಕೊಂಡಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಇನ್ನು, ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವಿನ ಪೆಗಾಸಸ್ ವಿಷಯದ ಬಗ್ಗೆ ನಿರಂತರ ವಿವಾದದ ನಡುವೆ. ಟಿಎಂಸಿ ಸಂಸದ ಸಂತನು ಸೇನ್ ಅವರು ರಾಜ್ಯಸಭೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಪೆಗಾಸಸ್ ವಿಷಯದ ಬಗ್ಗೆ ಭಾಷಣ ಪ್ರತಿಯನ್ನು ಕಸಿದುಕೊಂಡು ಹರಿದು ಹಾಕಿದ್ದರು.  ಸಂಸದ ಸಂತನು ಸೇನ್ ಅವರನ್ನು ರಾಜ್ಯ ಸಭೆಯಿಂದ ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ :  ಧುಮ್ಮಿಕ್ಕಿ ಹರಿದ ದೂಧಸಾಗರ ಜಲಪಾತ : ಬೆಳಗಾವಿ-ಗೋವಾ ರೈಲು ಸಂಚಾರ ಸ್ಥಗಿತ

Advertisement

Udayavani is now on Telegram. Click here to join our channel and stay updated with the latest news.

Next