Advertisement

ಧರೆಗುರುಳಿದ ಬೃಹದಾಕಾರದ ಅಶ್ವತ್ಥ ಮರ! ತಪ್ಪಿದ ಬಾರಿ ಅನಾಹುತ

10:17 AM Jun 17, 2020 | sudhir |

ಸುಳ್ಯಪದವು: ಶತಮಾನ ಇತಿಹಾಸ ಇರುವ ಬೃಹದಾಕಾರದ ಅಶ್ವತ್ಥಮರವೊಂದು ಮಂಗಳವಾರ ಮಧ್ಯರಾತ್ರಿ ಧರೆಗುಳಿದಿದೆ.
ಸುಳ್ಯಪದವು ಬಸ್ಸು ತಂಗುದಾಣದ ಸಮೀಪ ಇರುವ ಖಾಸಗಿ ಮಾಲಕತ್ವ ದ ಅಶ್ವತ್ಥ ಮರ ಸಾವ೯ಜನಿಕರಿಗೆ ಬಹಳ ಉಪಯೋಗವಾಗುತ್ತಿತ್ತು. ಮರದಡಿಯಲ್ಲಿ ವಾಹನಗಳನ್ನು ಪಾಕಿ೯೦ಗ್ ಮಾಡಲಾಗುತ್ತಿತ್ತು.ಮರದ ಎಲೆಗಳನ್ನು ಧಾಮಿ೯ಕ ಕಾಯ೯ಕ್ರಮಗಳಿಗೆ ಬಳಸಲಾಗುತ್ತಿತ್ತು.

Advertisement

ತಪ್ಪಿದ ಭಾರೀ ಅನಾಹುತ!
ಸುಳ್ಯ ಪದವು ಹೃದಯಭಾಗದಲ್ಲಿದ್ದ ಮರ ಯಾವುದೇ ಅನಾಹುತಗಳಿಗೆ ಕಾರಣವಾಗಿಲ್ಲ. ಮಾಲಕರ ಮನೆಯ ವಿರುದ್ದ ದಿಕ್ಕಿನಲ್ಲಿ ರಸ್ತೆ ಮೇಲೆ ಮರ ಬಿದ್ದಿದೆ. ಕೇರಳ ಕನಾ೯ಟಕ ಗಡಿಭಾಗವಾಗಿರುವುದರಿಂದ ನೂರಾರು ಪ್ರಯಾಣಿಕರು ,ಹತ್ತಾರು ವಾಹನಗಳು ಮರ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದರು. ಹಗಲು ಹೊತ್ತಿನಲ್ಲಿ ಮರಬಿದ್ದರೆ ಸಾವು ನೋವಿಗೆ ಕಾರಣವಾಗುತ್ತಿತ್ತು. ಅಂಚೆ ಕಛೇರಿ,ಬಸ್ಸು ತಂಗುದಾಣ, ವಿದ್ಯುತ್ ಕಂಬಗಳಿಗೂ ಯಾವುದೇ ಹಾನಿಯಾಗಿಲ್ಲ.

ಕಾಣಿ೯ಕವೆಂಬಂತೆ ದೈವಿ ಅಂಶದ ಮರ ತನ್ನ ಶತಪೂರೈಸಿ ಕಾಣಿ೯ಕವನ್ನು ಸಾದರಪಡಿಸಿದೆ ಎಂದು ಸಾವ೯ಜನಿಕರು ತಿಳಿಸಿದ್ದಾರೆ.

ಸೂಚನೆ ಕೊಟ್ಟ ಮರ!!!
ಭಾನುವಾರ ಸುರಿದ ಗಾಳಿ ಮಳೆಗೆ ಕೊಂಬೆಯೊಂದು ರಸ್ತೆಗೆ ಮುರಿದು ಬಿದ್ದಿದೆ. ಮೂರು ದಿನಗಳ ನಂತರ ಬೃಹತಾದಾಕಾರದ ಮರ ಸಂಪೂಣ೯ವಾಗಿ ರಸ್ತೆಗೆ ಅಡ್ಡಲಾಗಿ ಭಾರೀ ಸದ್ದಿನೊಂದಿಗೆ ಧರೆಗುಳಿದಿದೆ. ಸದ್ದು ಸುಮಾರು 3ಕಿ.ಮೀ.ವರೆಗೆ ಕೇಳಿಸಿದೆ. ಈ ಸಮಯದಲ್ಲಿ ಕರೆಂಟ್ ಹೋಗಿ ಮತ್ತೆ ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಮಾಲಕರ ಮಾಗ೯ದಶ೯ನದಲ್ಲಿ ತೆರವು ಕಾಯ೯ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next