Advertisement

ಜ.31 ರಿಂದ ಗಂಗಾವತಿಯಲ್ಲಿ ಪೇಜಾವರ ಶ್ರೀಗಳ ಗುರುವಂದನಾ

01:03 PM Jan 24, 2023 | Team Udayavani |

ಗಂಗಾವತಿ: ಉಡುಪಿಯ ಶ್ರೀ ಪೇಜಾವರ ಶ್ರೀಪಾದಂಗಳ ಗುರುವಂದನಾ ಕಾರ್ಯಕ್ರಮ ಜ.31 ರಿಂದ  ಫೆ.04 ವರೆಗೆ ನಗರದ ಸತ್ಯನಾರಾಯಣ ಪೇಟೆಯ ಶ್ರೀ ಸತ್ಯನಾರಾಯಣ ದೇವಸ್ಥಾನ ಹಾಗೂ ಶ್ರೀ ವಿಜಯಧ್ವಜ ವಿದ್ಯಾಪೀಠದಲ್ಲಿ ಆಯೋಜನೆ ಮಾಲಾಗಿದೆ ಎಂದು ದೇವಾಲಯದ ಮ್ಯಾನೇಜರ್ ವಾದಿರಾಜ ಕಲ್ಮಂಗಿ ತಿಳಿಸಿದ್ದಾರೆ.

Advertisement

ಅವರು ದೇವಾಲಯದ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಜ.31 ರಂದು ಬೆಳಗ್ಗೆ ವಿಶ್ವೇಶ ತೀರ್ಥ ಸಭಾಭವನದ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮ, ಸಂಜೆ ಪೂಜ್ಯ 1008 ಶ್ರೀ ವಿಶ್ವಪ್ರಸನ್ನ ಶ್ರೀ ಪಾದಂಗಳ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮ ಜರುಗಲಿದ್ದು ಜನಪ್ರತಿನಿಧಿಗಳು ಗಣ್ಯರು ಉಪಸ್ಥಿತರಿರುತ್ತಾರೆ. ಫೆ.03 ರಾತ್ರಿ 8  ಗಂಟೆಗೆ  ಮಾರುತಿ ಲಿಂಗಸ್ಗೂರು ತಂಡದವರಿಂದ ದಾಸವಾಣಿ ಕಾರ್ಯಕ್ರಮ. ಫೆ.04 ರಂದು ಬೆಳ್ಳಿಗ್ಗೆ ಶ್ರೀಗಳಿಂದ ಸಂಸ್ಥಾನ ಪೂಜೆ ಸಂಜೆ ಸಮಾರೋಪ ಶ್ರೀಗಳಿಂದ ಅನುಗ್ರಹ ಫಲಮಂತ್ರಾಕ್ಷತೆ ವಿತರಣೆ ಅನ್ನಪ್ರಸಾದ ವಿತರಣೆ ಜರುಗಲಿದೆ.

ಈ ಸಂದರ್ಭದಲ್ಲಿ ಎಸ್ ಬಿ ಎಚ್.ನಾರಾಯಣ ರಾವ್, ಪಂಡಿತ ವಾಗೀಶ ಗೊರೆಬಾಳ,ಗೊರೆಬಾಳ ಶ್ರೀ ನಿವಾಸ, ದರೋಜಿ ಶ್ರೀ ರಂಗ, ಅಮರೆಗೌಡ, ಜಿ.ಪವನಕುಮಾರ ಗುಂಡೂರು, ಮೇಗೂರು ರಾಘವೇಂದ್ರ, ನವಲಿ ಶ್ರೀ ನಾಥ,ಅರ್ಚಕ ಶ್ರೀ ಧರ,ಪತ್ರಕರ್ತ ನವಲಿ ರಾಮಮುರ್ತಿ ಸೇರಿ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next