– ನಿಂಬೆರಸ ಮತ್ತು ಹಾಲಿನ ಕೆನೆ ಬೆರೆಸಿ ನಿತ್ಯ ಕೈಕಾಲುಗಳಿಗೆ ಹಚ್ಚಿದರೆ ಕೈಕಾಲುಗಳ ಚರ್ಮ ಮೃದುವಾಗಿ ಹೊಳೆಯುತ್ತದೆ.
- ಪರಂಗಿ ಹಣ್ಣಿನ ತುಂಡುಗಳನ್ನು ಅರೆದು ಅದನ್ನು ಕೈಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿದರೆ ಕೈ ಮತ್ತು ಕಾಲುಗಳ ಚರ್ಮ ಕೋಮಲವಾಗುತ್ತದೆ.
- ಚಳಿಗಾಲದಲ್ಲಿ ಕೈಕಾಲು ಉಗುರುಗಳಿಗೆ ಬಾದಾಮಿ ಎಣ್ಣೆಗೆ ಚಿಟಿಕೆ ಉಪ್ಪು ಬೆರೆಸಿ ಲೇಪಿಸಬೇಕು.ಇದರಿಂದ ಮೃದುತ್ವ ಹಾಗೂ ಕಾಂತಿ ಹೆಚ್ಚುತ್ತದೆ.
– ಕಾಲಿನ ಹಿಮ್ಮಡಿ ಹಾಗೂ ಚರ್ಮ ಒಣಗಿ ಒಡೆಯುತ್ತಿದ್ದರೆ ಹಸಿ ಹಾಲಿಗೆ ಹರಳೆಣ್ಣೆ ಹಾಗೂ ಅರಸಿನ ಬೆರೆಸಿ ಲೇಪಿಸಿದರೆ ಒಡಕು ಗುಣಮುಖವಾಗುತ್ತದೆ.
- ಮಾವಿನ ಎಲೆಯ ರಸ ಹಚ್ಚಿದರೆ ಕಾಲಿನ ಒಡಕು ನಿವಾರಣೆಯಾಗುತ್ತದೆ.
- ಕೈಕಾಲುಗಳಿಗೆ ಮೆಹಂದಿ ಹಚ್ಚುವುದರಿಂದ ಅಂದವೂ ಹೆಚ್ಚುತ್ತದೆ ಜೊತೆಗೆ ದೇಹಕ್ಕೆ ತಂಪು
- ಬೇವಿರಸ ತುಳಸೀ ರಸ ಹಾಗೂ ಅರಸಿನ ಪುಡಿ ಬೆರೆಸಿ ಉಗುರಿನ ಸುತ್ತ ಚರ್ಮಕ್ಕೆ ಹಚ್ಚಿದರೆ ಊತ,ತುರಿಕೆ ನಿವಾರಣೆಯಾಗುತ್ತದೆ.
- ಕೊಬ್ಬರಿ ಎಣ್ಣೆ ,ಹಾಲು ಹಾಗೂ ಅರಸಿನ ಪುಡಿ ಬೆರೆಸಿ ಮೈಕೈ ಕಾಲುಗಳಿಗೆ ನಿತ್ಯ ಲೇಪಿಸಿ ಸ್ನಾನ ಮಾಡಿದರೆ ಚರ್ಮ ಕಾಂತಿಯಾಗುತ್ತದೆ.
Advertisement
ಮನೆಯಲ್ಲಿಯೇ ಪೆಡಿಕ್ಯೂರ್:– ಕಾಲುಗಳನ್ನು ಚೆನ್ನಾಗಿ ತೊಳೆದು ಸ್ವತ್ಛಗೊಳಿಸಿ ತದನಂತರ ಪಾಲಿಶ್ ರಿಮೂವರ್ ಹಾಕಿ ಹತ್ತಿಯ ಉಂಡೆಗಳಿಂದ ಒರೆಸಿ ತೆಗೆಯಿರಿ.ಹತ್ತಿಯ ಉಂಡೆಗಳಿಂದ ನಿಮ್ಮ ಕಾಲುಗಳ ಉಗುರುಗಳನ್ನು ಸರಿಯಾಗಿ ಉಜ್ಜಿಕೊಳ್ಳಿ.
– ಉತ್ತಮ ನೇಲ್ಕಟ್ನಿಂದ ಕಾಲುಗಳ ಉಗುರುಗಳನ್ನು ನೀಟಾಗಿ ಕತ್ತರಿಸಿ.ನೆನೆಪಿಡಿ ಕಾಲುಗಳ ಉಗುರುಗಳನ್ನು ಜಾಸ್ತಿ ಬೆಳೆದರೆ ನೋಡಲೂ ಚೆಂದ ಕಾಣುವುದಿಲ್ಲ.ಆರೋಗ್ಯಕ್ಕೂ ಒಳ್ಳೆಯದಲ್ಲ.
– ಅಗಲ ತಳವುಳ್ಳ ಪಾತ್ರೆಗೆ ಉಗುರು ಬೆಚ್ಚಗಿನ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಕಾಲುಗಳನ್ನು ಸ್ವಲ್ಪ ಹೊತ್ತು ನೆನೆಪಿಡಿ.
– ನಂತರ ನೇಲ್ಕಟ್ನಿಂದ ನಿಧಾನಕ್ಕೆ ಚರ್ಮವನ್ನು ಉಜ್ಜಿ.ಆಗ ಸಡಿಲಗೊಂಡಿರುವ ಚರ್ಮ ಬಿದ್ದು ಹೋಗುತ್ತದೆ.ಒಂದು ನಿಮಿಷದ ನಂತರ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಕಾಲುಗಳನ್ನು ಮೃದುವಾಗಿ ಉಜ್ಜಿ.ಉಗುರಿನವರೆಗೂ ಉಜ್ಜಿತ್ತಿರಿ.
– ನಂತರ ನೀರಿನಲ್ಲಿ ಚೆನ್ನಾಗಿ ತೊಳೆದು ಮೃದುವಾಗಿ ಒರೆಸಿಕೊಳ್ಳಿ.ನಂತರ ಅದಕ್ಕೆ ಸ್ಕಿನ್ ಕ್ರೀಮ್ಅನ್ನು ನಿಧಾನಕ್ಕೆ ಸವರಿ.
– ಆಗ ಕಾಲುಗಳ ಚರ್ಮ ಮೃದುವಾಗುತ್ತದೆ.ವಾರಕ್ಕೆರಡು ಬಾರಿಯಾದರೂ ರಾತ್ರಿ ಮಲಗುವಾಗ ಕಾಲಿಗೆ ಎಳ್ಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ.
– ಸ್ನಾನ ಮಾಡುವಾಗ ಕಲ್ಲುಗಳ ಮೇಲೆ ಕಾಲುಗಳನ್ನು ಚೆನ್ನಾಗಿ ಉಜ್ಜಿ.ಅದರಲ್ಲೂ ಹಿಮ್ಮಡಿಯನ್ನು 4 5 ಬಾರಿ ಉಜ್ಜಿ.ಇದರಿಂದ ಹೆಚ್ಚುವರಿ ಚರ್ಮ ಸಡಿಲಗೊಂಡು ಚರ್ಮ ಮೃದುವಾಗುತ್ತದೆ.