Advertisement

ದೇಶದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ 6 ಯೂಟ್ಯೂಬ್‌ ಚಾನೆಲ್‌ಗ‌ಳಿಗೆ ನಿಷೇಧ

06:33 PM Jan 12, 2023 | Team Udayavani |

ನವದೆಹಲಿ: ದೇಶದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ ಆರು ಯೂಟ್ಯೂಬ್‌ ಚಾನೆಲ್‌ಗ‌ಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

Advertisement

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್‌ ಇನ್ಫೋರ್ಮೇಷನ್‌ ಬ್ಯೂರೋ (ಪಿಐಬಿ) ಈ ಬಗ್ಗೆ ಪ್ರಕಟಣೆ ನೀಡಿದ್ದು, “20 ಲಕ್ಷ ಚಂದಾದಾರರನ್ನು ಹೊಂದಿರುವ 6 ಯೂಟ್ಯೂಬ್‌ ಚಾನೆಲ್‌ಗ‌ಳು 51 ಕೋಟಿ ವೀಕ್ಷಕರನ್ನು ಹೊಂದಿವೆ. ಅವುಗಳು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳ ಬಗ್ಗೆ, ಚುನಾವಣಾ ವ್ಯವಸ್ಥೆಯ ಬಗ್ಗೆ, ಕೇಂದ್ರ ಸರ್ಕಾರ ಕಾರ್ಯನಿರ್ವಹಣೆಯ ಬಗ್ಗೆ ಸುಳ್ಳು ಮಾಹಿತಿ ಬಿತ್ತರಿಸುತ್ತಿದ್ದವು. ಈ ಬಗ್ಗೆ ಪಿಐಬಿಯ ಮಾಹಿತಿ ದೃಢೀಕರಣ ವಿಭಾಗ ತನಿಖೆ ನಡೆಸಿ, ಅವುಗಳು ಸುಳ್ಳು ಪ್ರಚಾರ ನಡೆಸುತ್ತಿವೆ ಎಂದು ಬಹಿರಂಗೊಳಿಸಿತ್ತು. ಕಳೆದ ತಿಂಗಳು 4 ಚಾನೆಲ್‌ಗ‌ಳ ಮೇಲೆ ನಿಷೇಧ ಹೇರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next