Advertisement

ಅವರೆಕಾಳು ಬಾತ್‌

10:30 PM Jan 03, 2020 | mahesh |

ಬೇಕಾಗುವ ಸಾಮಗ್ರಿಗಳು:
ಬೆಳ್ತಕ್ಕಿ ಅಕ್ಕಿ -ಕಾಲು ಕೆ.ಜಿ
ಈರುಳ್ಳಿ- ಬೇಕಾಗುವಷ್ಟು
ಹಸಿ ಮೆಣಸು -2
ಟೋಮೊಟೋ -1
ಚಕ್ಕೆ, ಲವಂಗ, ( ಗರಂ ಮಸಾಲ)- ಸ್ವಲ್ಪ
ಹಸಿ ಅವರೆಕಾಳು -1/2 ಕಪ್‌
ಶುಂಠಿ – ಬೆಳ್ಳುಳ್ಳಿ ಪೇಸ್ಟ್‌- ಸ್ವಲ್ಪ
ಮೆಣಸಿನ ಹುಡಿ -ಸ್ವಲ್ಪ
ಅರಶಿನ ಹುಡಿ -ಸ್ವಲ್ಪ

Advertisement

ಮಾಡುವ ವಿಧಾನ: ಮೊದಲು ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಇದಕ್ಕೆ ಚೆಕ್ಕೆ, ಲವಂಗ, ಹಸಿ ಮೆಣಸು, ಹಸಿ ಅವರೆಕಾಳು, ಈರುಳ್ಳಿ, ಟೊಮೇಟೊ ಉಪ್ಪು ಹಾಕಿ ಹೆಚ್ಚಾಗಿ ಬೇಯುವರೆಗೆ ಬಿಡಿ ಅನಂತರ ಸ್ವಲ್ಪ ಶುಂಠಿ- ಬೆಳ್ಳುಳ್ಳಿ ಪೇಸ್ಟ್‌ ಹಾಕಿ. ಇದಕ್ಕೆ ತೊಳೆದು, ನೆನೆಸಿಟ್ಟ ಅಕ್ಕಿ ಹಾಕಿ ಅನಂತರ ಮೆಣಸಿನ ಹುಡಿ, ಅರಸಿನ ಹುಡಿ ಹಾಕಿ ಒಂದು ಲೋಟ ನೀರು ಹಾಕಿ ಕುಕ್ಕರ್‌ ಮುಚ್ಚಲ ಹಾಕಿ 2 ವಿಶಿಲ್‌ ಹಾಕಿದರೆ ಸಾಕು ಅವರೆಕಾಳು ಬಾತ್‌ ಸವಿಯಲು ಸಿದ್ಧ.

Advertisement

Udayavani is now on Telegram. Click here to join our channel and stay updated with the latest news.

Next