Advertisement

ಪ್ರೀತಿ, ಶಾಂತಿ ಏಸು ಜಗತ್ತಿಗೆ ನೀಡಿದ ಭವ್ಯ ಕಾಣಿಕೆ

10:55 AM Dec 11, 2018 | |

ಉಡುಪಿ: ಪ್ರಭು ಏಸು ಜಗತ್ತಿಗೆ ನೀಡಿರುವ ಭವ್ಯ ಕಾಣಿಕೆ ಪ್ರೀತಿ ಮತ್ತು ಶಾಂತಿ ಎಂದು ಉಡುಪಿ ಬಿಷಪ್‌ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಹೇಳಿದರು. ಫೆಲೋಶಿಪ್‌ ಆಫ್ ಉಡುಪಿ ಡಿಸ್ಟ್ರಿಕ್ಟ್ ಚರ್ಚಸ್‌ ವತಿಯಿಂದ ಉಡುಪಿ ಕ್ರಿಶ್ಚಿಯನ್‌ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ “ಸಮಾಧಾನ ಮಹೋತ್ಸವ’ವನ್ನು (ಫೆಸ್ಟಿವಲ್‌ ಆಫ್ ಪೀಸ್‌) ಶುಕ್ರವಾರ ಉದ್ಘಾಟಿಸಿ ಅವರು ಸಂದೇಶ ನೀಡಿದರು.

Advertisement

ಜಗತ್ತಿನಲ್ಲಿ ದ್ವೇಷ ಅಸೂಯೆಗಳಿವೆ. ಇಂತಹ ಸಂದರ್ಭದಲ್ಲಿ ಶಾಂತಿ, ಸಮಾಧಾನ ಮತ್ತು ಪ್ರೀತಿಯ ಅಗತ್ಯವಿದೆ. “ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು’ ಎಂಬುದಾಗಿ ಪ್ರಭು ಏಸು ಉಪದೇಶ ನೀಡಿದ್ದಾರೆ. ಪ್ರತಿಯೋರ್ವರ ಮನೆ ಮನಗಳಲ್ಲಿ ಶಾಂತಿ ನೆಲೆಸುವುದಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಬಿಷಪ್‌ ಹೇಳಿದರು.
 
ವಂ| ಸ್ಯಾಮ್‌ ಪಿ. ಚೆಲ್ಲದೊರೈ ಮುಖ್ಯ ಸಂದೇಶ ನೀಡಿದರು. ಉಡುಪಿ ಡಿಸ್ಟ್ರಿಕ್ಟ್ ಫ‌ುಲ್‌ ಗೋಸ್ಪೆಲ್‌ ಫಾಸ್ಟರ್ ಅಸೋಸಿಯೇಶನ್‌ ಅಧ್ಯಕ್ಷ ಫಾಸ್ಟರ್‌ ಜೋಸೆಫ್ ಜಮಖಂಡಿ, ದ.ಕ., ಕೊಡಗು ಮತ್ತು ಉಡುಪಿ ಜಿಲ್ಲಾ ಯುನೈಟೆಡ್‌ ಬಾಸೆಲ್‌ ಮಿಷನ್‌ ಅಧ್ಯಕ್ಷ ಜಯಪ್ರಕಾಶ್‌ ಸೈಮನ್‌, ಮಂಜುಳಾ ಚೆಲ್ಲದೊರೈ, ಜಾನ್‌ ಅಬ್ರಹಾಂ ಉಪಸ್ಥಿತರಿದ್ದರು. ಸುಚೇತ್‌ ಕೋಟ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. 200 ಸದಸ್ಯರನ್ನೊಳಗೊಂಡ ಗಾಯನ ಮಂಡಳಿಯಿಂದ ವಿಶೇಷ ಕೂಟ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next