ಇಸ್ಲಾಮಾಬಾದ್ : ಮಾಧ್ಯಮಗಳಲ್ಲಿ ಮಾನಹಾನಿಕರ ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಪಾಕಿಸ್ಥಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್ ಅವರಿಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಲೀಗಲ್ ನೋಟಿಸ್ ನೀಡಿದ್ದಾರೆ.
ಪಿಸಿಬಿ ಅಧ್ಯಕ್ಷ ರಮೀಜ್ ರಾಜ ಅವರ ಪರವಾಗಿ ಕಮ್ರಾನ್‌ಗೆ ಮಂಡಳಿಯ ಕಾನೂನು ವಿಭಾಗದಿಂದ ನೋಟಿಸ್ ನೀಡಲಾಗಿದೆ ಎಂದು ರಾಜ ಅವರಿಗೆ ನಿಕಟವಾದ ಮೂಲವು ಖಚಿತಪಡಿಸಿದೆ.
“ಕಮ್ರಾನ್ ವಿರುದ್ಧ ಅವರು ಯಾವ ಆರೋಪಗಳನ್ನು ಮಾಡಿದ್ದಾರೆಂದು ನನಗೆ ನಿಖರವಾಗಿ ತಿಳಿದಿಲ್ಲ ಆದರೆ ಕಮ್ರಾನ್ ಅವರ ಬಗ್ಗೆ ಮಾಧ್ಯಮಗಳಲ್ಲಿ ಮಾನಹಾನಿಕರ, ಸುಳ್ಳು ಮತ್ತು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಅಧ್ಯಕ್ಷರು ಭಾವಿಸಿದ ಕಾರಣ ಕಾನೂನು ನೋಟಿಸ್ ಕಳುಹಿಸಲಾಗಿದೆ” ಎಂದು ಮೂಲಗಳು ತಿಳಿಸಿವೆ.
ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿರುವ ಮತ್ತು ಅವರ ಕಾಮೆಂಟ್‌ಗಳಿಗಾಗಿ ಮಾಧ್ಯಮಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಪಾಕ್ ನ ಇತರ ಕೆಲವು ಮಾಜಿ ಆಟಗಾರರಿಗೆ ಹೆಚ್ಚಿನ ಕಾನೂನು ನೋಟಿಸ್‌ಗಳನ್ನು ಕಳುಹಿಸಬಹುದು ಎಂದು ಕ್ರಿಕೆಟ್ ಮಂಡಳಿಯ ಮೂಲವು ಸ್ಪಷ್ಟಪಡಿಸಿದೆ.