Advertisement

ಬಿಸಿಸಿಐ ವಿರುದ್ಧ ಪಿಸಿಬಿ 391 ಕೋಟಿ ರೂ. ದಾವೆ

06:00 AM Apr 12, 2018 | Team Udayavani |

ಹೊಸದಿಲ್ಲಿ: ಬಿಸಿಸಿಐ ವಿರುದ್ಧ 391 ಕೋಟಿ ರೂ. ಪರಿಹಾರ ಕೋರಿ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಹೂಡಿರುವ ದಾವೆ ಪರಿಹರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಮೂವರು ಸದಸ್ಯರ ಸಮಿತಿ ರಚಿಸಿದೆ. 2015-2023ರ ಅವಧಿಯಲ್ಲಿ ಪಾಕಿಸ್ಥಾನ 5 ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುವ ಕುರಿತು ತಿಳಿವಳಿಕೆ ಪತ್ರಕ್ಕೆ ಬಿಸಿಸಿಐ ಸಹಿ ಹಾಕಿತ್ತು. ಆದರೆ ಎರಡೂ ದೇಶಗಳ ನಡುವೆ ಉದ್ವಿಗ್ನ ಸ್ಥಿತಿಯಿರುವುದರಿಂದ ಕೇಂದ್ರ ಸರಕಾರ ಪಾಕ್‌ ಜತೆ ಕ್ರಿಕೆಟ್‌ ಆಡಲು ಅನುಮತಿ ನೀಡಿರಲಿಲ್ಲ. ಇದರಿಂದ ತನಗೆ ನಷ್ಟವಾಗಿದೆಯೆಂದು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಆರೋಪಿಸಿದೆ.

Advertisement

ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಆರೋಪವನ್ನು ಬಿಸಿಸಿಐ ನಿರಾಕರಿಸಿದೆ. ಪಿಸಿಬಿ ಜತೆಗೆ ನಾವು ಮಾಡಿಕೊಂಡಿದ್ದು ತಿಳಿವಳಿಕೆ ಪತ್ರವೇ (ಎಒಯು) ಹೊರತು ಒಪ್ಪಂದವಲ್ಲ. ಜತೆಗೆ ಕೇಂದ್ರ ಸರಕಾರದ ತೀರ್ಮಾನದ ಕಾರಣ ನಮಗೆ ಆ ದೇಶದೊಂದಿಗೆ ಕ್ರಿಕೆಟ್‌ ಆಡಲು ಸಾಧ್ಯವಾಗಿಲ್ಲ. ಆದ್ದರಿಂದ ಇಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದು ಬಿಸಿಸಿಐ ಹೇಳಿಕೊಂಡಿದೆ. ಈ ವಿವಾದವನ್ನು ಬಗೆಹರಿಸಲು ಐಸಿಸಿ ಮೂರು ಸದಸ್ಯರ ಸಮಿತಿ ರಚಿಸಿದೆ. ಈ ಸಮಿತಿ ನೀಡುವ ತೀರ್ಮಾನ ಅಂತಿಮ ಇದನ್ನು ಪ್ರಶ್ನಿಸುವಂತಿಲ್ಲವೆಂದು ಅದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next