ಮುಂಬೈ: ಪೇಟಿಎಂ ಷೇರು ಮೌಲ್ಯದಲ್ಲಿ ಶೇ.75ರಷ್ಟು ಕುಸಿದಿದೆ. ಇದು ದೇಶದ ಅತಿದೊಡ್ಡ ಡಿಜಿಟಲ್ ಪಾವತಿ ಸೇವೆ ಒದಗಿಸುತ್ತಿರುವ ಪೇಟಿಎಂ ಮಾಲೀಕತ್ವದ ಒನ್ 97 ಕಮ್ಯೂನಿಕೇಷನ್ಸ್ ಲಿಮಿಟೆಡ್ ಕಂಪನಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಐಪಿಒ ಮೂಲಕ ಷೇರುಗಳ ಮಾರಾಟ ಮಾಡಿದ್ದ ಒನ್ 97 ಕಮ್ಯೂನಿಕೇಷನ್ಸ್‌ಗೆ ಲಾಕ್ ಇನ್ ಅವಧಿ ಮುಗಿಯುತ್ತಿದ್ದಂತೆ ಸಂಕಷ್ಟ ಎದುರಾಗಿದೆ.
ಒಂದು ವರ್ಷದ ಹಿಂದೆ 2.4 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಪೇಟಿಎಂ ಕಂಪನಿ ಮಾರಾಟ ಮಾಡಿತ್ತು. ಆದರೆ ಒಂದು ವರ್ಷದ ಹಿಂದಿನ ಅದರ ಮಾರುಕಟ್ಟೆ ಮೌಲ್ಯಕ್ಕಿಂತ ಪ್ರಸ್ತುತ ಮೌಲ್ಯ ಶೇ.75ರಷ್ಟು ಇಳಿಕೆಯಾಗಿದೆ. ಇದು ಜಾಗತಿಕ ಮಟ್ಟದಲ್ಲೇ ಅತಿದೊಡ್ಡ ಕುಸಿತ ಎನ್ನಲಾಗಿದೆ. ಈ ಹಿಂದೆ 2012ರಲ್ಲಿ ಐಪಿಒ ಲಾಕ್ ಇನ್ ಅವಧಿ ಮುಗಿದ ಬೆನ್ನಲ್ಲೇ ಸ್ಪೇನ್‌ನ ಬ್ಯಾಂಕಿಯಾ ಎಸ್‌ಎ ಷೇರು ಮೌಲ್ಯದಲ್ಲಿ ಶೇ.82ರಷ್ಟು ಕುಸಿತವಾಗಿತ್ತು.