Advertisement

Paytm: ಟಿಪಿಎಪಿ ವರ್ಗಾವಣೆ ಪರಿಶೀಲಿಸುವಂತೆ ಆರ್‌ಬಿಐ ಸೂಚನೆ

12:23 AM Feb 24, 2024 | Team Udayavani |

ಮುಂಬಯಿ: ಪೇಟಿಎಂ ಬಳಸುವ ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಯುಪಿಐ ಮುಂದುವರಿಕೆಗಾಗಿ 4-5 ಬ್ಯಾಂಕ್‌ಗಳಿಗೆ ಥರ್ಡ್‌ ಪಾರ್ಟಿ ಆ್ಯಪ್ಲಿಕೇಶನ್‌ ಪ್ರೊವೈಡರ್‌(ಟಿಪಿಎಪಿ) ವರ್ಗಾವಣೆಗೆ ಕೋರಿ ಪೇಟಿಎಂ ಮಾಲಕತ್ವದಲ್ಲಿ ಒನ್‌97 ಕಮ್ಯೂನಿಕೇಶನ್ಸ್‌ ಲಿ. ಮಾಡಿರುವ ಮನವಿಯನ್ನು ಪರಿಶೀಲಿಸುವಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(ಎನ್‌ಪಿಸಿಐ)ಕ್ಕೆ ಆರ್‌ಬಿಐ ಸೂಚಿಸಿದೆ.

Advertisement

ಗ್ರಾಹಕರ ಹಿತದೃಷ್ಟಿಯಿಂದ ಪಿಪಿಬಿಎಲ್‌ ಬದಲಾಗಿ ಬೇರೆ ಬ್ಯಾಂಕ್‌ಗಳಿಗೆ ಟಿಪಿಎಪಿ ವರ್ಗಾ ವಣೆ ನಿಟ್ಟಿನಲ್ಲಿ ಎನ್‌ಪಿಸಿಐ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಅದರಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಬಂದರೆ, ಭವಿಷ್ಯದಲ್ಲಿ ಪೇಟಿಎಂ ಆ್ಯಪ್‌ ಬಳಸುವ ಯುಪಿಐ ಗ್ರಾಹಕರು ಎಂದಿನಂತೆ ಪಾವತಿ ಮುಂದುವರಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next