Advertisement

Paytm: ಗ್ರಾಹಕರ ಅನುಕೂಲಕ್ಕಾಗಿ ಆ್ಯಕ್ಸಿಸ್‌ ಬ್ಯಾಂಕ್‌ ಜತೆ ಪೇಟಿಎಂ ಪಾಲುದಾರಿಕೆ

09:31 PM Feb 17, 2024 | Team Udayavani |

ನವದೆಹಲಿ: ಈ ಹಿಂದಿನಂತೆ ತನ್ನ ಗ್ರಾಹಕರು ವಹಿವಾಟು ನಡೆಸುವುದನ್ನು ಮುಂದುವರಿಸುವಂತಾಗಲು ಪೇಟಿಎಂ ಬ್ಯಾಂಕ್‌ ತನ್ನ ನೋಡಲ್‌ ಖಾತೆಯನ್ನು ಆಕ್ಸಿಸ್‌ ಬ್ಯಾಂಕ್‌ಗೆ ವರ್ಗಾಯಿಸಿದೆ ಎಂದು ಪೇಟಿಎಂ ಮಾಲೀಕತ್ವದ ಒನ್‌ 97 ಕಮ್ಯನಿಕೇಶನ್ಸ್‌ ತಿಳಿಸಿದೆ.

Advertisement

ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಎಸೊð ಖಾತೆಯನ್ನು ತೆರೆಯುವ ಮೂಲಕ ಈ ಹಿಂದೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿ.(ಪಿಪಿಬಿಎಲ್‌)ನಲ್ಲಿದ್ದ ನೋಡಲ್‌ ಖಾತೆಯನ್ನು ಆಕ್ಸಿಸ್‌ ಬ್ಯಾಂಕ್‌ಗೆ ವರ್ಗಾಯಿಸಲಾಗಿದೆ. ಇದರಿಂದ ಪೇಟಿಎಂ ಆ್ಯಪ್‌ ಬಳಸುವ ಗ್ರಾಹಕರು ಎಂದಿನಂತೆ ನಿರಾಳವಾಗಿ ವಹಿವಾಟು ನಡೆಸಬಹುದು ಎಂದು ಕಂಪನಿ ಹೇಳಿದೆ.

ಆರ್‌ಬಿಐ ಗಡುವು ಮಾ.15ರವರೆಗೆ ವಿಸ್ತರಣೆ

ಈ ಹಿಂದೆ, ಫೆ.29ರ ನಂತರ ಯಾವುದೇ ಗ್ರಾಹಕರ ಖಾತೆ, ಪ್ರಿಪೇಡ್‌ ಖಾತೆ, ವ್ಯಾಲೆಟ್‌, ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ, ಸಾಲ ವಹಿವಾಟು ಅಥವಾ ಟಾಪ್‌ ಅಪ್‌ ಮಾಡದಂತೆ ಪಿಪಿಬಿಎಲ್‌ಗೆ ಆರ್‌ಬಿಐ ನಿರ್ಬಂಧಿಸಿತ್ತು. ಈಗ ಗ್ರಾಹಕರ ಹಿತದೃಷ್ಟಿಯಿಂದ ಈ ಗಡುವನ್ನು ಮಾ.15ರವರೆಗೆ ವಿಸ್ತರಿಸಲಾಗಿದೆ. ಇದೇ ವೇಳೆ, ಗ್ರಾಹಕರು ತಮ್ಮ ಪೇಟಿಎಂ ಪಾವತಿ ಬ್ಯಾಂಕ್‌ ಖಾತೆಗಳು ಮತ್ತು ವ್ಯಾಲೆಟ್‌ಗಳಿಂದ ಹಣ ಹಿಂಪಡೆಯಬಹುದು ಅಥವಾ ಆ ಹಣ ಖಾಲಿಯಾಗುವವರೆಗೂ ಬಳಸಬಹುದು. ಆದರೆ ಮಾ.15ರ ನಂತರ ಹೊಸದಾಗಿ ಯಾವುದೇ ಹಣ ಠೇವಣಿ ಮಾಡುವಂತಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಅಲ್ಲದೇ ಈ ಖಾತೆಗಳಿಗೆ ತಮ್ಮ ಸಂಬಳ ಅಥವಾ ಸರ್ಕಾರದ ಸಬ್ಸಿಡಿಗಳು ಸೇರಿದಂತೆ ಇತರೆ ಪಾವತಿಗಳನ್ನು ಸ್ವೀಕರಿಸುವ ಗ್ರಾಹಕರು, ಮಾ.15ರೊಳಗೆ ಪರ್ಯಾಯ ವ್ಯವಸ್ಥೆ ಕಡೆಗೆ ಹೊರಳಬೇಕಾಗುತ್ತದೆ ಎಂದೂ ಸೂಚಿಸಿದೆ.

c

Advertisement
Advertisement

Udayavani is now on Telegram. Click here to join our channel and stay updated with the latest news.

Next