Advertisement

ಪೊಲೀಸರ ಕಾರಿಗೆ ಢಿಕ್ಕಿ ಹೊಡೆದ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಬಂಧನ!

11:40 AM Mar 13, 2022 | Team Udayavani |

ಹೊಸದಿಲ್ಲಿ: ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರನ್ನು ಫೆಬ್ರವರಿ 22 ರಂದು ದೆಹಲಿ ಪೊಲೀಸರು ಬಂಧಿಸಿದ್ದರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು ಎಂದು ವರದಿ ತಿಳಿಸಿದೆ.

Advertisement

ವಿಜಯ್ ಶೇಖರ್ ಶರ್ಮಾ ಅವರು ತಮ್ಮ ವಾಹನವನ್ನು ಅರಬಿಂದೋ ಮಾರ್ಗ್‌ನಲ್ಲಿ ದಕ್ಷಿಣ ದೆಹಲಿ ಪೊಲೀಸ್ ಉಪ ಆಯುಕ್ತರ ಕಾರಿಗೆ ಢಿಕ್ಕಿ ಹೊಡೆದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ವಿಜಯ್ ಶೇಖರ್ ಶರ್ಮಾ ಅವರು ತಮ್ಮ ಜಾಗ್ವಾರ್ ಲ್ಯಾಂಡ್ ರೋವರ್ ಕಾರನ್ನು ದೆಹಲಿಯ ಮದರ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ ಬೆನಿಟಾ ಮೇರಿ ಜೈಕರ್ ಅವರ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸಿಪಿ ಅವರ ಚಾಲಕ ದೀಪಕ್ ಕಾರಿಗೆ ಪೆಟ್ರೋಲ್ ತುಂಬಿಸಲು ಹೊರಟಿದ್ದರು. ಕಾರಿಗೆ ಢಿಕ್ಕಿ ಹೊಡೆದ ನಂತರ ವಿಜಯ್ ಶೇಖರ್ ಶರ್ಮಾ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಕಾಶ್ಮೀರ ಫೈಲ್ಸ್ ಚಿತ್ರ ತಂಡ

ಆದರೆ, ದೀಪಕ್ ಕಾರಿನ ನಂಬರ್ ನೋಟ್ ಮಾಡಿಕೊಂಡು ಡಿಸಿಪಿಗೆ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ, ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅಪವೇಗದ ಅಥವಾ ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

Advertisement

ಆಗ ಕಾರು ಹರಿಯಾಣದ ಗುರುಗ್ರಾಮ್ ಮೂಲದ ಕಂಪನಿಗೆ ಸೇರಿದ್ದು ಎಂದು ಪತ್ತೆಯಾಯಿತು. ನಂತರ, ದಕ್ಷಿಣ ದೆಹಲಿಯಲ್ಲಿ ವಾಸಿಸುವ ವಿಜಯ್ ಶೇಖರ್ ಶರ್ಮಾಗೆ ಇದು ಪತ್ತೆಯಾಗಿದೆ. ನಂತರ ಠಾಣೆಗೆ ಕರೆಸಿ ಬಂಧಿಸಲಾಯಿತು. ಬಳಿಕ ಅವರಿಗೆ ಜಾಮೀನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next