ಬೆಂಗಳೂರು: ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ರೂ. ಕಟ್ಟಬೇಕು ಎಂದು ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಿದೆ ಎಂದು ಟ್ವೀಟ್ ಮೂಲಕ ಕುಟುಕಿರುವ ಬಿಜೆಪಿ, ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು, ಟಿಕೆಟ್‌ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ. ಸಾಮಾನ್ಯ ಕಾರ್ಯಕರ್ತರ ಪಾಡೇನು ಎಂದು ಕೇಳಿದೆ.
ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್‌ನಲ್ಲಿ ಮಾರಿಕೊಳ್ಳುವರೇ ಎಂದು ಪ್ರಶ್ನಿಸಿದೆ.