Advertisement

ಬಾಕಿ ಕೊಡಿ; ವಿದ್ಯುತ್‌ ಖರೀದಿಸಿ: ಕರ್ನಾಟಕ ಸೇರಿ 13 ರಾಜ್ಯಗಳಿಗೆ ತಡೆ

07:46 PM Aug 19, 2022 | Team Udayavani |

“ಬಾಕಿ ಪಾವತಿ ಮಾಡುವವರೆಗೆ ವಿದ್ಯುತ್‌ ಖರೀದಿ ಮತ್ತು ವಿತರಣೆ ಮಾಡಬೇಡಿ’ ಎಂದು ಕರ್ನಾಟಕ ಸೇರಿದಂತೆ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ ಫ‌ರ್ಮಾನು ಹೊರಡಿಸಿದೆ. ಖಾಸಗಿ ವಿದ್ಯುತ್‌ ಉತ್ಪಾದಕರಿಗೆ ಒಟ್ಟು 5,085 ಕೋಟಿ ರೂ. ಮೊತ್ತವನ್ನು ಈ ರಾಜ್ಯಗಳು ನೀಡಲು ಬಾಕಿ ಇವೆ. ದಕ್ಷಿಣ ಭಾರತದಿಂದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿಕೊಂಡಿವೆ. ಇದರಿಂದ ವಿದ್ಯುತ್‌ ಪೂರೈಕೆ ಮತ್ತು ಸರಬರಾಜಿನ ಮೇಲೆ, ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳೇನು ನೋಡೋಣ.

Advertisement

ಏನಿದು ಬೆಳವಣಿಗೆ?
ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಎಸ್ಕಾಂಗಳು ಮತ್ತು ವಿತರಣಾ ಸಂಸ್ಥೆಗಳು ಖಾಸಗಿ ವಿದ್ಯುತ್‌ ಉತ್ಪಾದಕರಿಂದ ತುರ್ತು ಸಂದರ್ಭದಲ್ಲಿ ವಿದ್ಯುತ್‌ ಖರೀದಿ ಮಾಡುತ್ತವೆ. ಸದರಿ ಪ್ರಕರಣದಲ್ಲಿ ಕರ್ನಾಟಕ ಸೇರಿ 13 ರಾಜ್ಯಗಳು ಖಾಸಗಿ ವಿದ್ಯುತ್‌ ಉತ್ಪಾದಕ ಕಂಪನಿಗಳಿಗೆ ಬಾಕಿ ಉಳಿಸಿಕೊಂಡಿವೆ. ಗುರುವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ 13 ರಾಜ್ಯಗಳು ವಿದ್ಯುತ್‌ ಖರೀದಿ ಮತ್ತು ವಿತರಣೆ ಮಾಡದಂತೆ ತಾಕೀತು ಮಾಡಲಾಗಿದೆ.

ಇಂಥ ನಿರ್ಧಾರ ಯಾರದ್ದು ಮತ್ತು ಏನಾಗಲಿದೆ?
ಕೇಂದ್ರ ವಿದ್ಯುತ್‌ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್‌ ವ್ಯವಸ್ಥೆ ನಿರ್ವಹಣಾ ಸಂಸ್ಥೆ (ಪೋಸ್ಕೋ Power System Operation Corporation) ರಾಜ್ಯಗಳ ಮೇಲೆ ತಡೆ ಹೇರಿದೆ. ವಿದ್ಯುತ್‌ (ವಿಳಂಬವಾಗಿ ಸರ್ಚಾರ್ಜ್‌ ಮತ್ತು ಸಂಬಂಧಿತ ವಿಚಾರಗಳ ಪಾವತಿ) ನಿಯಮ 2022ರ ಅನ್ವಯ ರಾಜ್ಯಗಳಿಗೆ ಖರೀದಿ ತಡೆ ಹೇರಲಾಗಿದೆ. ಜೂನ್‌ನಲ್ಲಿಯೇ ಈ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಈ ಕ್ರಮದಿಂದ ಕೆಲ ಪ್ರದೇಶದಲ್ಲಿ ಅಲ್ಪಾವಧಿಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮೊದಲ ಬಾರಿಗೆ ರಾಜ್ಯಗಳ ಮೇಲೆ ಇಂಥ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಮತ್ತು ಅವುಗಳ ಬಾಕಿ (ಕೋಟಿ ರೂ.ಗಳಲ್ಲಿ)
ತೆಲಂಗಾಣ 1,381, ತಮಿಳುನಾಡು 926, ರಾಜಸ್ಥಾನ 501, ಜಮ್ಮು ಮತ್ತು ಕಾಶ್ಮೀರ 435, ಆಂಧ್ರಪ್ರದೇಶ 413, ಕರ್ನಾಟಕ 355, ಮಹಾರಾಷ್ಟ್ರ 382, ಮಧ್ಯಪ್ರದೇಶ 229, ಜಾರ್ಖಂಡ್‌ 215, ಬಿಹಾರ 174, ಮಣಿಪುರ 30, ಛತ್ತೀಸ್‌ಗಡ 27.5, ಮಿಜೋರಾಂ 17. ತೆಲಂಗಾಣ ಸರ್ಕಾರದ ಪ್ರಕಾರ ಬಾಕಿ ಮೊತ್ತ ಇಲ್ಲ ಮತ್ತು ಎಲ್ಲವನ್ನೂ ಪಾವತಿ ಮಾಡಲಾಗಿದೆ. ಆಂಧ್ರಪ್ರದೇಶ ಕೂಡ ಇದೇ ಮಾತುಗಳನ್ನಾಡಿದೆ.

ಬಾಕಿ ಪಾವತಿಸದಿದ್ದರೆ ಏನಾಗಲಿದೆ?
ಪ್ರತಿ ತಿಂಗಳು ಸರ್ಕಾರಗಳು ಬಾಕಿ ಮೊತ್ತ ಪಾವತಿ ಮಾಡದೇ ಇದ್ದರೆ ಶೇ.0.5 ಸರ್ಚಾರ್ಜ್‌ ಸೇರ್ಪಡೆಯಾಗುತ್ತದೆ. ಮೂಲ ದರದಿಂದ ವಿಳಂಬವಾಗಿ ಪಾವತಿ ಶುಲ್ಕ ಶೇ.3ನ್ನು ಮೀರುವುದಿಲ್ಲ ಎಂಬ ಷರತ್ತೂ ಇದೆ. ಜತೆಗೆ ಅಲ್ಪಾವಧಿಗೆ ರಾಜ್ಯಗಳ ಎಸ್ಕಾಂಗಳು ಮತ್ತು ವಿತರಣಾ ಕಂಪನಿಗಳು ಅಲ್ಪಾವಧಿಗೆ ವಿದ್ಯುತ್‌ ಖರೀದಿಸುವುದರಿಂದ ತಡೆಯನ್ನೂ ಹೇರಲಾಗುತ್ತದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next