Advertisement

ಎಪಿಎಂಸಿಗೆ ಜಮೀನು ನೀಡಲು ಹಣ ಪಾವತಿಸಿ; ಜಿಲ್ಲಾಧಿಕಾರಿ

06:34 PM Sep 29, 2022 | Team Udayavani |

ಕೋಲಾರ: ಶಾಸಕಿ ರೂಪಕಲಾ ಮನವಿ ಹಿನ್ನಲೆಯಲ್ಲಿ ಜಿಲ್ಲೆಯ ಕೆಜಿಎಫ್‌ ಎಪಿಎಂಸಿ ಮಾರುಕಟ್ಟೆಗೆ ಮಂಜೂ ರಾಗಿರುವ 25 ಎಕರೆ ಜಾಗ ಎಪಿಎಂಸಿ ವಶಕ್ಕೆ ಪಡೆ
ಯುವುದು, ನಗರ ನಿರಾಶ್ರೀತರಿಗೆ ನಿವೇಶನ ನೀಡಲು 16 ಎಕರೆ ಜಮೀನು ಗುರುತಿಸುವ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕಿ ರೂಪಕಲಾ ಡೀಸಿಗೆ ಮನವಿ ಮಾಡಿ, ಕೆಜಿಎಫ್‌ ತಾಲೂಕು ವಿಭಜನೆಯಾದ ನಂತರ ಪ್ರತ್ಯೇಕ ಎಪಿಎಂಸಿ ಮಾಡಲು ಸಿದ್ಧತೆ ನಡೆದಿದ್ದು, 25 ಎಕರೆ ಜಾಗ ಗುರುತಿಸಲಾಗಿದೆ. ಅದಕ್ಕೆ ಮಾರುಕಟ್ಟೆ ಮೌಲ್ಯದ ಅರ್ಧದಷ್ಟು 72 ಲಕ್ಷ ರೂ. ಹಣ ಕಟ್ಟಲು ಈಗಾಗಲೇ ಎಪಿಎಂಸಿ ರಾಜ್ಯ ನಿರ್ದೇಶಕರು ಸೂಚನೆ ನೀಡಿದ್ದು, ಅದರಂತೆ ಹಣ ಕಟ್ಟಲು ಸೂಚಿಸುವಂತೆ ಕೋರಿದರು.

ಅದರಂತೆ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಬಂಗಾರಪೇಟೆ ತಹಶೀಲ್ದಾರ್‌ ದಯಾನಂದ್‌ ಹಾಗೂ ಎಪಿಎಂಸಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಡೀಸಿ, ಕೂಡಲೇ ಸಂಬಂಧಿಸಿದ 72 ಲಕ್ಷ ರೂ., ಬಿಡುಗಡೆಗೆ ಸೂಚಿಸಿದರು.

ಸೂರಹಳ್ಳಿ ಬಳಿ 16 ಎಕರೆ ಜಾಗ: ಕೆಜಿಎಫ್ ನಗರ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಸೂರಹಳ್ಳಿ ಸಮೀಪ 16 ಎಕರೆ ಜಾಗ ಗುರುತಿಸಿಕೊಡಲು ಶಾಸಕಿ ರೂಪಕಲಾ ಮಾಡಿದ ಮನವಿಗೆ ಸ್ಪಂದಿಸಿದ ಡೀಸಿ, ಅಗತ್ಯ ಕ್ರಮವಹಿಸಲು ಸೂಚಿಸಿ, ಫಲಾನುಭವಿಗಳ ಆಯ್ಕೆ, ನಿವೇಶನ ವಿಂಗಡಿ ಸುವ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲು ನಗರ ಯೋಜನಾ ನಿದೇಶಕರು ಹಾಗೂ ನಗರಸಭೆಗೆ ಸೂಚನೆ ನೀಡಿದರು. ಈ ಕಾರ್ಯದಲ್ಲಿ ವಿಳಂಬ ಮಾಡದೇ ಶೀಘ್ರ ಜಮೀನು ಗುರುತಿಸಿ, ಫಲಾನುಭವಿ ಗಳಿಂದ ಅಗತ್ಯ ದಾಖಲೆಗಳನ್ನು ಪಡೆದು ಆಯ್ಕೆ ಪ್ರಕ್ರಿಯೆ ನಡೆಸಿ, ಅರ್ಹರಿಗೆ ನಿವೇಶನ ಹಂಚಲು ಕ್ರಮ ವಹಿಸಿ ಎಂದು ಹೇಳಿದರು.

ಟ್ರಕ್‌ ಟರ್ಮಿನಲ್‌ ಜಾಗಕ್ಕೆ ಮನವಿ: ಇದೇ ಸಂದರ್ಭದಲ್ಲಿ ಕೆಜಿಎಫ್‌ ನಗರಕ್ಕೆ ಟ್ರಕ್‌ ಟರ್ಮಿನಲ್‌ ಅಗತ್ಯವಿದ್ದು, ಅದಕ್ಕೆ ಜಾಗ ಗುರುತಿಸಿಕೊಡಲು ಡೀಸಿಗೆ ಶಾಸಕಿ ರೂಪಕಲಾ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡೀಸಿ ವೆಂಕಟ್‌ ರಾಜಾ, ಹೊಸ ತಾಲೂಕು ಹಾಗೂ ಅಲ್ಲೇ ಆರ್‌ಟಿಒ ಕಚೇರಿಯೂ ಇದೆ. ಅಗತ್ಯ ಜಾಗ ಗುರುತಿಸಿಕೊಡಿ ಎಂದು ಕೆಜಿಎಫ್‌ ತಹಶೀಲ್ದಾರ್‌ ಸುಜಾತಾ ಅವರಿಗೆ ಸೂಚಿಸಿದರು.

Advertisement

ಮಿನಿ ವಿಧಾನಸೌಧ ಶೀಘ್ರದಲ್ಲೇ ಉದ್ಘಾಟನೆ: ಕೆಜಿಎಫ್‌ ಮಿನಿ ವಿಧಾನಸೌಧ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಂದಾಯ ಸಚಿವರು ಉದ್ಘಾಟನೆಗೆ ಶೀಘ್ರವೇ ದಿನಾಂಕ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ಉಳಿಕೆ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಿಕೊಡಲು ಶಾಸಕರು ಕೋರಿದರು.

ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಮಾತನಾಡಿ, ಕಟ್ಟಡಕ್ಕೆ ಶೀಘ್ರ ಅಗತ್ಯ ಕಾಂಪೌಂಡ್‌ ನಿರ್ಮಿಸಿಕೊಡಿ, ಸುರಕ್ಷತೆಗೆ ತಂತಿ ಬೇಲಿ ನಿರ್ಮಾಣ ಮಾಡಿಕೊಟ್ಟು, ವಿದ್ಯುತ್‌ ಸಂಪರ್ಕ ಮತ್ತಿತರ ಕೆಲಸ ಮುಗಿಸಿಕೊಡಿ ಎಂದು ಲೋಕೋಪಯೋಗಿ ಎಇಇ ಸರಸ್ವತಿಗೆ ಸೂಚಿಸಿದರು. ಸಭೆಯಲ್ಲಿ ವಿಭಾಗಾಧಿಕಾರಿ ವೆಂಕಟ ಲಕ್ಷ್ಮಮ್ಮ, ಕೆಜಿಎಫ್‌ ನಗರಸಭೆ ಅಧ್ಯಕ್ಷ ವಿ.ಮುನಿ ಸ್ವಾಮಿ, ಪೌರಾಯುಕ್ತ ಡಾ.ಮಾಧವಿ, ಕೆಜಿಎಫ್‌ ತಹಶೀಲ್ದಾರ್‌ ಸುಜಾತಾ, ಬಂಗಾರಪೇಟೆ ತಹಶೀಲ್ದಾರ್‌
ದಯಾನಂದ್‌, ಕೆಜಿಎಫ್‌ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಹೀರ್‌ ಅಬ್ಟಾಸ್‌, ಎಪಿಎಂಸಿ ಸಹಾಯಕ ನಿರ್ದೇಶಕ ಕಿರಣ್‌, ನಗರಸಭೆ ಎಇಗಳಾ ಮಂಜು ನಾಥ್‌, ಶಶಿಕುಮಾರ್‌, ಲೋಕೋಪಯೋಗಿ ಇಲಾಖೆ ಎಇಇ ಸರಸ್ವತಿ, ಎಂಜಿನಿಯರ್‌ ರಾಜಶೇಖರ್‌ ಮತ್ತಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next