Advertisement

ಐಮೊಬೈಲ್ ಪೇ ಆ್ಯಪ್ ಮೂಲಕ ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಾಕಿ ತಕ್ಷಣ ಪಾವತಿಸಿ

04:50 PM Sep 07, 2021 | |

ಮುಂಬೈ: ಐಸಿಐಸಿಐ ಬ್ಯಾಂಕ್ ತನ್ನ ಲಕ್ಷಾಂತರ ಉಳಿತಾಯ ಖಾತೆ ಗ್ರಾಹಕರಿಗೆ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ’ಐಮೊಬೈಲ್‌ಪೇ’ ಬಳಸಿಕೊಂಡು ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸುವ ಸೌಲಭ್ಯ ಕಲ್ಪಿಸಿದೆ. ಕೆಲವೇ ಸೆಕೆಂಡುಗಳಲ್ಲಿ ಗ್ರಾಹಕರು ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ಗಳನ್ನು ಆ್ಯಪ್‌ಗೆ ಸೇರಿಸಬಹುದು ಮತ್ತು ನಂತರ ಅದೇ ಆ್ಯಪ್‌ನಿಂದ ತಮ್ಮ ಬಾಕಿಯನ್ನು ಪಾವತಿಸಬಹುದು ಮತ್ತು ಕಾರ್ಡ್ ನಿರ್ವಹಿಸಬಹುದು. ಇದು ಸಾಮಾನ್ಯವಾಗಿ ಅನೇಕ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಅನುಕೂಲತೆಯನ್ನು ನೀಡುತ್ತದೆ.

Advertisement

ಹೊಸ ವೈಶಿಷ್ಟ್ಯವು ಗ್ರಾಹಕರು ಹಲವಾರು ಕಾರ್ಡ್‌ಗಳ ನಿರ್ವಹಣೆಯನ್ನು ಅಥವಾ ಪಾವತಿಸಲು ಹಲವಾರು ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ತೊಂದರೆಯನ್ನು ನಿವಾರಿಸುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಬಿಲ್ ಪಾವತಿ ಜ್ಞಾಪನೆಗಳನ್ನು ಹೊಂದಿಸಲು, ಎಲ್ಲ ಕಾರ್ಡ್‌ಗಳ ಪಾವತಿ ಇತಿಹಾಸವನ್ನು ವೀಕ್ಷಿಸಲು, ವಾಟ್ಸಾಪ್ ಮೂಲಕ ಪಾವತಿ ದೃಢೀಕರಣವನ್ನು ಹಂಚಿಕೊಳ್ಳಬಹುದು ಮತ್ತು ತಮ್ಮ ಕಾರ್ಡ್‌ಗಳ ಬಿಲ್ಲಿಂಗ್ ಸೈಕಲ್‌ಗೆ ಅನುಗುಣವಾಗಿ ನಿಗದಿತ ದಿನಾಂಕಗಳನ್ನು ನಿರ್ವಹಿಸಲು ಮತ್ತು ಬದಲಾಯಿಸಲು ಅನುವು ಮಾಡಿಕೊಡುತ್ತದೆ.

ಗ್ರಾಹಕರು ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬಹುದು?

* ಐಮೊಬೈಲ್ ಪೇಗೆ ಲಾಗಿನ್ ಮಾಡಿ ಮತ್ತು ’ಕಾರ್ಡ್‌ಗಳು ಮತ್ತು ವಿದೇಶೀ ವಿನಿಮಯ’ ವಿಭಾಗವನ್ನು ಆಯ್ಕೆ ಮಾಡಿ

* ಇತರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗೆ ಹೋಗಿ

Advertisement

* ’ಕಾರ್ಡ್ ಸೇರಿಸಿ ಮೇಲೆ ಟ್ಯಾಪ್ ಮಾಡಿ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ

* ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಕಳುಹಿಸಿದ ಓಟಿಪಿಯನ್ನು ದೃಢೀಕರಿಸಿ ಮತ್ತು ಕಾರ್ಡ್ ತಕ್ಷಣವೇ ಸೇರಿಸಲ್ಪಟ್ಟಿರುತ್ತದೆ.

* ಕಾರ್ಡನ್ನು ಒಮ್ಮೆ ಸೇರಿಸಿದ ನಂತರ, ಅದನ್ನು “ಇತರೆ ಬ್ಯಾಂಕ್ ಕ್ರೆಡಿಟ್ ಕಾರ್ಡ್” ಟ್ಯಾಬ್ ಅಡಿಯಲ್ಲಿ ನೋಡಬಹುದು ಮತ್ತು ನಿರ್ವಹಿಸಬಹುದು

ಇದನ್ನೂ ಓದಿ:ಆಸೆಗಣ್ಣಿನ ಗೊಂಬೆ ಟು ‘ಹುಣ್ಸ್ ಮಕ್ಕಿ ಹುಳ’ : ಬೆಂದ ಬದುಕಿನ ಸ್ಫೂರ್ತಿದಾಯಕ ನಡೆ  

‘ಐಮೊಬೈಲ್ ಪೇ’ ಬ್ಯಾಂಕಿನ ಅತ್ಯಾಧುನಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿದ್ದು ಅದು 350 ಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತದೆ. ಯಾವುದೇ ಬ್ಯಾಂಕಿನ ಗ್ರಾಹಕರಿಗೆ ಪಾವತಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕ್ ಈ ಹಿಂದೆ ಐಮೊಬೈಲ್ ಎಂದು ಕರೆಯಲ್ಪಡುತ್ತಿದ್ದ ಆ್ಯಪ್‌ಅನ್ನು ’ಐಮೊಬೈಲ್ ಪೇ’ ಆಗಿ ಡಿಸೆಂಬರ್ 2020 ರಲ್ಲಿ ಪರಿವರ್ತಿಸಿತು. ಆ್ಯಪ್‌ಗೆ ಲಿಂಕ್ ಮಾಡಲು ಮತ್ತು ಪಾವತಿ/ವಹಿವಾಟುಗಳನ್ನು ಡಿಜಿಟಲ್ ಆಗಿ ಮಾಡಲು ಅನುವು ಮಾಡಿಕೊಟ್ಟಿತು. ಸಾಂಕ್ರಾಮಿಕದ ಈ ಸವಾಲಿನ ಸಮಯದಲ್ಲಿ ಅವರ ಮನೆಯಲ್ಲೇ ಆರಾಮವಾಗಿ ಮತ್ತು ಸುರಕ್ಷತೆಯಿಂದ ಕುಳಿತುಕೊಂಡು ಉಳಿತಾಯ ಖಾತೆ, ಗೃಹ ಸಾಲ, ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲ ಸೇರಿದಂತೆ ಸಂಪೂರ್ಣ ಶ್ರೇಣಿಯ ಐಸಿಐಸಿಐ ಬ್ಯಾಂಕ್ ಸೇವೆಗಳಿಗೆ ಇದು ಪ್ರವೇಶವನ್ನು ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next