Advertisement

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್

12:22 PM Sep 29, 2022 | Team Udayavani |

ಬೀದರ್: ಕಾಂಗ್ರೆಸ್ ನ ‘ಪೇಸಿಎಂ’ ಅಭಿಯಾನ ರಾಜ್ಯದ ಜನತೆಗೆ ಮತ್ತು ಸಜ್ಜನ, ಕಾಮನ್ ಸಿಎಂಗೆ ಮಾಡುವ ಅಪಮಾನ. ಇದಕ್ಕೆ ರಾಜ್ಯದ ಸಾಮಾನ್ಯ ಜನರು ಚುನಾವಣೆಯಲ್ಲಿ ಉತ್ತರ ನೀಡುತ್ತಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಲೇವಡಿ ಮಾಡಿದರು.

Advertisement

ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸನದ್ದು ಭಾರತ್‌ ಜೋಡೋ ಅಲ್ಲ. ಕಾಂಗ್ರೆಸ್ ಛೋಡೋ- ಫೋಡೋ ಯಾತ್ರೆ ಆಗಿದೆ. ಕಾಂಗ್ರೆಸ್ ನಾಯಕನಿಲ್ಲದ ಪಕ್ಷವಾಗಿದೆ. ರಾಹುಲ್ ಗಾಂಧಿಯನ್ನು ಜನ‌ ತಿರಸ್ಕರಿಸಿದ್ದಾರೆ‌. ನಿರಂತರ ‌ಸೋಲಿನಿಂದ ಕಾಂಗ್ರೆಸ್‌ ಕಂಗೆಟ್ಟಿದೆ‌. ಕಾಂಗ್ರೆಸ್ ಪಕ್ಷ ಬಿಡುವವರ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಇದನ್ನೂ ಓದಿ:ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

ಕಲ್ಯಾಣ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ‌ ಗೆಲ್ಲಲಿದೆ. ಬೀದರ ಜಿಲ್ಲೆಯ ಆರಕ್ಕೆ‌ ಆರೂ ಸೀಟು‌ ಗೆಲ್ಲಲಿದೆ. ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಅರುಣ್ ಸಿಂಗ್ ಅವರು ಬೀದರ್ ನ ಝರಣಾ ನರಸಿಂಹ ಮಂದಿರ, ಅನಂತಶಯನ ಮಂದಿರ ಮತ್ತು ಗುರುದ್ವಾರಾ‌ ಸೇರಿದಂತೆ‌ ವಿವಿಧ ಮಂದಿರಗಳಿಗೆ ತೆರಳಿ ದರುಶನ ಪಡೆದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next