Advertisement

ಪೇ ಸಿಎಂ ಅಭಿಯಾನ: ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತ್ರ; ಸಿಎಂ ಬೊಮ್ಮಾಯಿ

04:51 PM Sep 21, 2022 | Team Udayavani |

ಬೆಂಗಳೂರು: ಪೇ ಸಿಎಂ ಅಭಿಯಾನ  ರಾಜ್ಯ ಮತ್ತು ನನ್ನ  ಹೆಸರು ಕೆಡಿಸಲು ನಡೆಸಿರುವ  ಷಡ್ಯಂತರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಇದನ್ನೂ ಓದಿ:ರಾಜಸ್ಥಾನ; ವಿಧಾನಸಭಾ ಕಲಾಪಕ್ಕೆ ದನದ ಜೊತೆ ಆಗಮಿಸಿದ ಬಿಜೆಪಿ ಶಾಸಕ…ಆದರೆ

ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ವ್ಯವಸ್ಥಿತವಾಗಿ ಕರ್ನಾಟಕ ರಾಜ್ಯ ಮತ್ತು ನನ್ನ ಹೆಸರು ಕೆಡಿಸಲು ಷಡ್ಯಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಕರಣ ದಾಖಲು ಮಾಡಲು ಸೂಚಿಸಿದ್ದೇನೆ ಎಂದರು.

ಆಧಾರ ರಹಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ  ಮಾಡಲು ಎಲ್ಲರಿಗೂ ಬರುತ್ತದೆ. ಆದರೆ ಇದು ಸುಳ್ಳು ಎಂದು ಜನಕ್ಕೆ  ತಿಳಿಯುತ್ತದೆ. ಇದಕ್ಕೆ ಯಾವ ಬೆಲೆಯೂ ಇಲ್ಲ. ಆದರೆ ರಾಜ್ಯದ ಹೆಸರು ಕೆಡಿಸುವ ಪ್ರಯತ್ನಕ್ಕೆ ಕಡಿವಾಣ ಹಾಕುವ ಪ್ರಯತ್ನ ನಮ್ಮದು ಎಂದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next