ಹೈದರಾಬಾದ್: ಮುಂದಿನ ವರ್ಷದ ತೆಲಂಗಾಣ ವಿಧಾನಸಭೆ ಚುನಾವಣ ಕಣ ಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅಕ್ಟೋಬರ್ನಲ್ಲಿ ರಾಜ್ಯಾ ದ್ಯಂತ ರಾಜಕೀಯ ಯಾತ್ರೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅದಕ್ಕೆಂದೇ ಅವರು ತಲಾ 19 ಲಕ್ಷ ರೂ. ಬೆಲೆಯ 8 ಕಾರನ್ನು ಖರೀದಿಸಿದ್ದು, ಅದು ಎಲ್ಲೆಡೆ ಸುದ್ದಿಯಾಗಿದೆ.
ಕಾರುಗಳಿಗೆಂದೇ ಪವನ್ ಕಲ್ಯಾಣ್ ಒಟ್ಟು 1.52 ಕೋಟಿ ರೂ. ವೆಚ್ಚ ಮಾಡಿದ್ದಾರೆಂದು ಹೇಳಲಾಗಿದೆ. ಕಾರುಗಳ ಫೋಟೋವನ್ನು ಜನಸೇನಾ ಪಕ್ಷವು ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಈ ಫೋಟೋಕ್ಕೆ ಕಾಮೆಂಟ್ ಮಾಡಲಾರಂಭಿಸಿರುವ ನೆಟ್ಟಿಗರು, “ಸಿಎಂ ಆಗುವುದಕ್ಕಂತೂ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಅವರೇ ಸಿಎಂ ಎಂದುಕೊಂಡು ಅದ್ದೂರಿ ಮೆರವಣಿಗೆ ಮಾಡಲು ಈ ಕಾರು’ ಎಂದು ಟೀಕಿಸಲಾರಂಭಿಸಿದ್ದಾರೆ.