Advertisement

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

02:31 PM Nov 07, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಮಿ ಕೊಲೆ (Renukaswamy Case) ಪ್ರಕರಣದ ಎ1 ಪವಿತ್ರಾ ಗೌಡ (Pavithra Gowda) ಜಾಮೀನು ಅರ್ಜಿಯ ವಿಚಾರಣೆ ಗುರುವಾರ (ನ.7 ರಂದು) ಹೈಕೋರ್ಟಿನಲ್ಲಿ ನಡೆದಿದೆ.

Advertisement

ನಟಿ ಪ್ರವಿತ್ರಾ ಗೌಡ ಸೇರಿ ಅನುಕುಮಾರ್, ಲಕ್ಷ್ಮಣ್ ಮತ್ತು ನಾಗರಾಜ್ ಅವರ ಜಾಮೀನು ಅರ್ಜಿಗಳ ವಿಚಾರಣೆ ನ್ಯಾಯಾಧೀಶ ವಿಶ್ವಜಿತ್ ಪೀಠದಲ್ಲಿ ನಡೆದಿದೆ.

ಆರೋಪಿ ಲಕ್ಷ್ಮಣ್ ಮತ್ತು ನಾಗರಾಜು ಸೇರಿದಂತೆ ನಾಲ್ವರ ಪರ ವಕೀಲರು ವಾದ ಮಂಡನೆಗೆ  ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ವಿಚಾರಣೆ ನ.21 ಕ್ಕೆ ಮುಂದೂಡಲಾಗಿದೆ.

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್‌ (Darshan) ಅವರಿಗೆ ಇತ್ತೀಚೆಗೆ ಹೈಕೋರ್ಟ್‌ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಜಾಮೀನು ನೀಡಿದೆ.

Advertisement

ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್‌ ಅವರಿಗೆ ಜಾಮೀನು ನೀಡಿದ್ದು, ದರ್ಶನ್‌ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ದರ್ಶನ್‌ ಅವರಿಗೆ ಸರ್ಜರಿ ನಡೆಸುವುದು ಸೂಕ್ತವೆಂದು ಪರೀಕ್ಷೆ ಮಾಡಿ ಹೇಳಿದ್ದಾರೆ. ಆದರೆ ದರ್ಶನ್‌ ಸರ್ಜರಿಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಈಗಾಗಲೇ ದರ್ಶನ್‌ ಅವರ ಮೆಡಿಕಲ್‌ ವರದಿಯನ್ನು ನ್ಯಾಯಾಲಕ್ಕೆ ಸಲ್ಲಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next