Advertisement

ಪಾವನಾ ‘ಇನ್‌’ ಸೈಡ್‌ ಸ್ಟೋರಿ!

02:37 PM Nov 20, 2021 | Team Udayavani |

ಪಾವನಾ ಗೌಡ ಸದ್ಯ “ಇನ್‌’ ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಪೋಸ್ಟರ್‌ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದ್ದಾರೆ.

Advertisement

ಚಿತ್ರದಲ್ಲಿ ಹಳ್ಳಿಯಿಂದ ಬೆಂಗಳೂರಿಗೆ ಬಂದು ನೌಕರಿ ಮಾಡುತ್ತ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಹುಡುಗಿಯ ಪಾತ್ರದಲ್ಲಿ ಪಾವನಾ ಕಾಣಿಸಿಕೊಳ್ಳುತ್ತಿದ್ದಾರೆ.

ಒಬ್ಬಂಟಿಯಾಗಿರುವ ಯುವತಿಯೊಬ್ಬಳ ಮುಂದೆ ಅನಿರೀಕ್ಷಿತವಾಗಿ ಎದುರಾಗುವ ಲಾಕ್‌ಡೌನ್‌, ಅದರಿಂದ ಆಕೆಯ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು, ಅದೆಲ್ಲವನ್ನು ಆಕೆ ಎದುರಿಸುವ ರೀತಿ ಇಂಥ ಒಂದಷ್ಟು ಸಂಗತಿಗಳ ಸುತ್ತ “ಇನ್‌’ ಸಿನಿಮಾ ನಡೆಯುತ್ತದೆ.

ಇದನ್ನೂ ಓದಿ:‘ಯಾರಿಗೆ ಬೇಕು ಈ ಲೋಕ’ ಫ‌ಸ್ಟ್‌ ಲುಕ್‌ ರಿಲೀಸ್‌

ಬಡಿಗೇರ್‌ ದೇವೇಂದ್ರ ಕಥೆ ಬರೆದು ನಿರ್ದೇಶಿಸಿದ್ದಾರೆ. “ಇನ್‌’ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಅದ್ಧೂರಿ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಹುಡುಗಿಯೊಬ್ಬಳ ಜೀವನದಲ್ಲಿ ಲಾಕ್‌ಡೌನ್‌ ಏನೆಲ್ಲ ಪರಿಣಾಮ ಬೀರುತ್ತದೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next