Advertisement

ಕ್ರೇಜಿ ಟೀಸರ್‌ ನಲ್ಲಿ ಗ್ಲಾಮರಸ್‌ ಪಾವನಾ

06:57 AM May 31, 2021 | Team Udayavani |

ಕ್ರೇಜಿಸ್ಟಾರ್‌ ರವಿಚಂದ್ರನ್‌ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ಟೀಸರ್‌ ವೊಂದನ್ನು ಬಿಡುಗಡೆ ಮಾಡಿದ್ದು, ಆ ಟೀಸರ್‌ ನಲ್ಲಿ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ಗಳ ಸಣ್ಣ ಝಲಕ್‌ ನೀಡಿದ್ದಾರೆ.

Advertisement

ಹೌದು, ರವಿಚಂದ್ರನ್‌ ಮೂರು ಹೊಸ ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದಾರೆ. “ಗಾಡ್‌’, “60′ ಹಾಗೂ “ಬ್ಯಾಡ್‌ ಬಾಯ್ಸ್’ ಎಂಬ ಟೈಟಲ್‌ ನಡಿ ಮೂರು ಸಿನಿಮಾಗಳನ್ನು ಘೋಷಿಸಿಕೊಂಡಿದ್ದು, ಇದನ್ನು ಟೀಸರ್‌ ನಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ. ಒಂದಷ್ಟು ಕೋಟ್ಸ್‌ ಗಳ ಮೂಲಕವೂ ಟೀಸರ್‌ ಗಮನ ಸೆಳೆದಿದೆ. ಎರಡು ಚಿತ್ರಗಳಲ್ಲಿ ರವಿ ಚಂದ್ರನ್‌ ಅವರು ನಟಿಸಿದರೆ, ಮತ್ತೂಂದು ಚಿತ್ರ “ಬ್ಯಾಡ್‌ ಬಾಯ್ಸ್ ’ನಲ್ಲಿ ಅವರ ಪುತ್ರರಾದ ಮನುರಂಜನ್‌ ಹಾಗೂ ವಿಕ್ರಮ್‌ ಕಾಣಿಸಿಕೊಳ್ಳಲಿದ್ದಾರೆ.

ಟೀಸರ್‌ ನಲ್ಲಿ ಇವರಿಬ್ಬರನ್ನು ತೋರಿಸಿದ್ದಾರೆ ರವಿಚಂದ್ರನ್‌. ಇನ್ನು, ನಟಿ ಪಾವನಾ ಗೌಡ ಸಖತ್‌ ಬೋಲ್ಡ್‌ ಲುಕ್‌  ಮೂಲಕ ಟೀಸರ್‌ ನಲ್ಲಿ ಗಮನ ಸೆಳೆದಿದ್ದಾರೆ.

ಎಲ್ಲಾ  ಓಕೆ, ಈ ಸಿನಿಮಾಗಳು ಯಾವಾಗ ಆರಂಭವಾಗುತ್ತವೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಈ ನಡುವೆಯೇ ರವಿಚಂದ್ರನ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಟನೆಯ “ಕನ್ನಡಿಗ’ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಇದರಲ್ಲಿ ಲಿಪಿಕಾರನಾಗಿ ನಟಿಸಿದ್ದಾರೆ. ರವಿಚಂದ್ರನ್‌ ನಿರ್ದೇಶನದ “ರವಿ ಬೋಪಣ್ಣ’ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next