Advertisement

ಪಾವಗಡ : ಆಟೋ ರಿಕ್ಷಾ –ಬೊಲೆರೋ ನಡುವೆ ಅಪಘಾತ : ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

10:56 PM Jul 06, 2022 | Team Udayavani |

ಪಾವಗಡ : ಆಟೋ ರಿಕ್ಷಾ ಹಾಗೂ ಬೊಲೆರೋ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಪಾವಗಡ ತಾಲೂಕಿನ ಟಿ.ಎನ್.ಪೇಟೆ ಬಳಿ ಇರುವ ರೈಲ್ವೆ ಬ್ರಿಡ್ಜ್ ಬಳಿ ಬುಧವಾರ ರಾತ್ರಿ 8ಗಂಟೆ ಸಮಯದಲ್ಲಿ ಸಂಭವಿಸಿದೆ.

Advertisement

ಘಟನೆಯಲ್ಲಿ ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಅವರನ್ನು ತುಮಕೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರು ಹೆಚ್ಚಿನವರು ಪಾವಗಡದ ರೊಪ್ಪ ಹಾಗೂ ಪಾವಗಡ ಪಟ್ಟಣಕ್ಕೆ ಸೇರಿದವರಾಗಿದ್ದಾರೆ.

ಆಂಧ್ರದ ಹಿಂದೂಪುರ ಸಮೀಪದಲ್ಲಿರುವ ಪರಗಿ ಬಳಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದವರು ಮರಳಿ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ರಿಕ್ಷಾದಲ್ಲಿ ಹದಿಮೂರು ಮಂದಿ ಮಹಿಳೆಯರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪಾವಗಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ..

Advertisement

ಇದನ್ನೂ ಓದಿ : ಅಗ್ನಿಪಥ: ವಾಯುಪಡೆಗೆ ಸೇರಲು ಬರೋಬ್ಬರಿ 7.50 ಲಕ್ಷ ಅರ್ಜಿ

 

Advertisement

Udayavani is now on Telegram. Click here to join our channel and stay updated with the latest news.

Next