Advertisement

Pavagada: ಪತಿಯಿಂದ ಪತ್ನಿ ಹತ್ಯೆ: ಆರೋಪಿ ಪರಾರಿ

12:49 PM Mar 15, 2024 | Team Udayavani |

ಪಾವಗಡ: ಪತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಪರಾರಿಯಾದ ಘಟನೆ ಪಾವಗಡ‌ ಪೊಲೀಸ್ ಠಾಣೆ ವ್ಯಾಪ್ತಿಯ ಸಿ.ಕೆ.‌ ಪುರ ಗ್ರಾಮ ಪಂಚಾಯಿತಿಗೆ ಸೇರಿದ ಉದ್ದಂಡಪ್ಪನಪಾಳ್ಯದಲ್ಲಿ ಮಾ. 15ರ ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆ ಸಮಯದಲ್ಲಿ ನಡೆದಿದೆ.

Advertisement

ರಾಮಾಂಜಿನಮ್ಮ(36) ಹತ್ಯೆಯಾದವರು. ಆರೋಪಿ ರಮೇಶ್ (42) ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ಚಾಕುವಿನಿಂದ ತಿವಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ‌ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next