ಪಾವಗಡ: ಟಿವಿಎಸ್ ದ್ವಿಚಕ್ರ ವಾಹನ ಹಾಗೂ ಆಂಧ್ರ ಸರ್ಕಾರಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಕಸಾಬ ಹೋಬಳಿಯ ಮುರಾರಾಯನ ಹಳ್ಳಿ ಬಳಿ ಗುರುವಾರ ನಡೆದಿದೆ.
ಆಂಧ್ರದ ಆರ್. ಅನಂತಪುರ ಗ್ರಾಮದ ನಿವಾಸಿ ಲಕ್ಷ್ಮಿನರಸಪ್ಪ (58)ಮೃತ ದುರ್ದೈವಿ.
ದೊಮ್ಮತಮರಿ ಗ್ರಾಮದ ಕಡೆಯಿಂದ ಮಡಕಶಿರಾ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ, ಮಡಕಶಿರಾ ಕಡೆಯಿಂದ ದೊಮ್ಮತಮರಿ ಕಡೆಗೆ ಬರುತ್ತಿದ್ದ ಆಂಧ್ರ ಸರ್ಕಾರಿ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಢಿಕ್ಕಿಯ ಪರಿಣಾಮಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ನಟ ಸುಶಾಂತ್ ಟೀ ಶರ್ಟ್ ಮಾರಾಟ…Boycott ಅಮೆಜಾನ್, ಫ್ಲಿಪ್ ಕಾರ್ಟ್ ಟ್ರೆಂಡಿಂಗ್ ಆಗಿದ್ದೇಕೆ?
Related Articles
ಘಟನೆ ಪಾವಗಡ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.