Advertisement

ಎಲ್‌ಎಸಿಯಲ್ಲಿ ಮತ್ತಷ್ಟು ಗಸ್ತು ವ್ಯವಸ್ಥೆ

11:30 AM Sep 28, 2022 | Team Udayavani |

ನವದೆಹಲಿ: ಚೀನದೊಂದಿಗೆ ಹೊಂದಿಕೊಂಡಂತೆ ಇರುವ ಗಡಿ ಪ್ರದೇಶದಲ್ಲಿ ಭೂಸೇನೆ ಗಸ್ತು ವ್ಯವಸ್ಥೆ, ಅತ್ಯಾಧುನಿಕ ಮದ್ದು-ಗುಂಡುಗಳನ್ನು ಹೊಂದಿಕೊಂಡಿರುವ ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡಿದೆ.

Advertisement

ಈ ಪೈಕಿ 100 ಕೆ9 ವಜ್ರ ಹೊವಿಟ್ಜರ್‌, ಅಲ್ಟ್ರಾ ಲೈಟ್‌ ಎಂ-777 ಹೊವಿಟ್ಜರ್‌, ಪಿನಾಕಾ ರಾಕೆಟ್‌ ವ್ಯವಸ್ಥೆ ಮತ್ತು ಧನುಷ್‌ ಗನ್‌ ಸಿಸ್ಟಮ್‌ ಸೇರಿಕೊಂಡಿವೆ.

ಚೀನ ಜತೆಗೆ ಇರುವ ವಾಸ್ತವಿನ ಗಡಿ ರೇಖೆ (ಎಲ್‌ಎಸಿ)ಯಾದ್ಯಂತ ಮಾನವ ರಹಿತ ಡ್ರೋನ್‌ ನಿಯೋಜನೆ ಮಾಡಲೂ ಸೇನೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

15-20 ಕಿಮೀ ದೂರದವರೆಗೆ ಯುಎವಿಗಳ ಮೂಲಕ ಗಸ್ತು ನಡೆಸುವುದು ಉದ್ದೇಶ. ಆದರೆ, ಅವುಗಳನ್ನು ಎಲ್‌ಎಸಿ ವ್ಯಾಪ್ತಿಯ 90 ಕಿಮೀ ದೂರದ ವರೆಗೆ ವಿಸ್ತರಿಸುವ ಇರಾದೆಯೂ ಇದೆ. ರಕ್ಷಣಾ ಖರೀದಿ ಮಂಡಳಿ ಹೆಚ್ಚುವರಿಯಾಗಿ 100 ಕೆ9 ವಜ್ರ ಗನ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next