Advertisement

ಆರೆಸ್ಸೆಸ್‌ನಿಂದ ದೇಶಪ್ರೇಮ ವೃದ್ಧಿ

11:38 AM Jan 21, 2019 | |

ತಾಳಿಕೋಟೆ: ಹೆತ್ತ ತಾಯಿ ಪಾಪ ಪುಣ್ಯ ಕಲಿಸಿಕೊಟ್ಟರೆ ಆರೆಸ್ಸೆಸ್‌ ದೇಶ ಪ್ರೇಮ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯಪುರ ವಿಭಾಗದ ಶಾರೀರಿಕ ಪ್ರಮುಖರಾದ ಬಾಬು ಭಟ್ಕಳ ನುಡಿದರು.

Advertisement

ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಾಳಿಕೋಟೆ ನಗರ ಶಾಖೆ ವತಿಯಿಂದ ಆಯೋಜಿಸಿದ್ದ ಗಣ ವೇಷಧಾರಿ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಂತರ ಕನ್ನಡ ಶಾಲಾ ಮೈದಾನದಲ್ಲಿ ನಡೆದ ತಾಲೂಕು ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಭಾರತ ದೇಶ ಪುಣ್ಯಭೂಮಿಯಾಗಿದೆ. ಈ ಭೂಮಿಯಲ್ಲಿ ಜನಿಸಿದ ಛತ್ರಪತಿ ಶಿವಾಜಿ ಮಹಾರಾಜರು ಜಾತಿ ವ್ಯವಸ್ಥೆಯನ್ನು ದೂರಿಕರಿಸಿ ಹಿಂದೂ ಸಾಮ್ರಾಜ್ಯ ಸ್ಥಾಪನೆ ಮಾಡಿದರು. ಅವರ ಬೆಳವಣಿಗೆಯುದ್ದಕ್ಕೂ ತಾಯಿ ಜೀಜಾಮಾತೆಯ ಪ್ರೇರಣೆ, ಧೈರ್ಯದ ಮಾತುಗಳು ಅವರ ಬೆಳವಣಿಗೆಗೆ ಕಾರಣವಾದವು. ಅಂತಹ ಸಂಸ್ಕಾರವಂತ ಧೈರ್ಯ ತುಂಬುವಂತಹ ಕಾರ್ಯ ನಡೆಯಬೇಕಾಗಿದೆ ಎಂದರು. ತಾಯಿಯಾದವಳು ಮಕ್ಕಳಿಗೆ ಕೇವಲ ಸಂಸ್ಕಾರವನ್ನು ಕಲಿಸಿದರೆ ಸಾಲದು, ವೀರ ಮಹಾ ಪುರುಷರಾದ ಛತ್ರಪತಿ ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್‌, ಮಹಾರಾಣಾ ಪ್ರತಾಪ್‌ ಸಿಂಹ್‌ ಅವರ ಕಥೆಗಳನ್ನು ಹೇಳಿ ವಿಶ್ಲೇಷಿಸುವಂತಹ ಕಾರ್ಯವಾಗಬೇಕು. ಇದರಿಂದ ಜಾತಿ ವ್ಯವಸ್ಥೆಯಿಂದ ಹಾಳಾಗುತ್ತಿರುವ ದೇಶವನ್ನು ಒಂದುಗೂಡಿಸುವುದರೊಂದಿಗೆ ಹಿಂದೂತ್ವದ ತಳಹದಿ ಮೇಲೆ ಡಾ| ಹೆಗಡೆವಾರ್‌ ಮತ್ತು ಗರೂಜಿ ಅವರ ಕನಸಿನಂತೆ ಕಟ್ಟಲು ಸಾಧ್ಯವಾಗುತ್ತದೆ ಎಂದರು. ಗೋಂದಳಿ ಸಮಾಜದ ಅಧ್ಯಕ್ಷ ಶಿವಾಜಿ ಸೂರ್ಯವಂಶಿ ವೇದಿಕೆಯಲ್ಲಿದ್ದರು.

ಫಥ ಸಂಚಲನ: ಕಾರ್ಯಕ್ರಮಕ್ಕೂ ಮೊದಲು ರಾಜವಾಡೆಯಿಂದ ಪ್ರಾರಂಭಗೊಂಡ ಗಣ ವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ವಿವಿಧ ಮಾರ್ಗಗಳ ಮೂಲಕ ಸಂಚರಿಸಿ ಕನ್ನಡ ಶಾಲಾ ಮಾದಾನದ ಮುಖ್ಯ ವೇದಿಕೆಗೆ ತಲುಪಿತು.

ಪಥ ಸಂಚಲನದ ದಾರಿಯುದ್ದಕ್ಕೂ ರಂಗೋಲಿ ಚಿತ್ತಾರಗಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜ, ಸ್ವಾಮಿ ವಿವೇಕಾನಂದ, ಭಗತ್‌ ಸಿಂಗ್‌, ಮಹಾರಾಣಾ ಪ್ರತಾಪ ಸಿಂಹ್‌, ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನವರ ಛದ್ಮ ವೇಷ ಧರಿಸಿದ ಮಕ್ಕಳು ಹಾಗೂ ಭಾರತ ಮಾತೆ ಭಾವ ಚಿತ್ರಗಳೊಂದಿಗೆ ಸ್ವಾಗತ ಕೋರಲಾಯಿಒತು.

Advertisement

ಸಮಾವೇಶಕ್ಕೂ ಮುಂಚೆ ಸ್ವಯಂ ಸೇವಕರಿಂದ ದಂಡ ಪ್ರದರ್ಶನ, ಘೋಷವಾದ್ಯ ಜರುಗಿದವು. ಪಥ ಸಂಚಲನ ವೇಳೆ ಅಹಿತಕರ ಘಟನೆ ಜರುಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಡಿಎಸ್‌ಪಿ ಮಹೇಶ್ವರಗೌಡ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸೈ ಜಿ.ಎಸ್‌. ಬಿರಾದಾರ ಬಂದೋಬಸ್ತ್ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next