Advertisement

ಪತ್ರಾ ಚವ್ಲಾ ಹಗರಣ: ಸಂಜಯ್ ರಾವತ್ ನ್ಯಾಯಾಂಗ ಬಂಧನ ಆ.22ರವರೆಗೆ ವಿಸ್ತರಣೆ

03:43 PM Aug 08, 2022 | Team Udayavani |

ಮುಂಬೈ: ಪತ್ರಾ ಚಾವ್ಲ್ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ಕೋರ್ಟ್ ಸೋಮವಾರ (ಆಗಸ್ಟ್ 08) ಶಿವಸೇನಾ ಮುಖಂಡ ಸಂಜಯ್ ರಾವತ್ ನ್ಯಾಯಾಂಗ ಬಂಧನವನ್ನು ಆಗಸ್ಟ್ 22ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

Advertisement

ಇದನ್ನೂ ಓದಿ:ಮಾನ ಮರ್ಯಾದೆ ಇದೆಯೇನ್ರಿ…? ಕಾಮಗಾರಿ ವಿಳಂಬಿಸಿದ ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

ನ್ಯಾಯಾಂಗ ಬಂಧನದಲ್ಲಿರುವ ವೇಳೆ ಎಲ್ಲಾ ಔಷಧಗಳನ್ನು ಬಳಸಲು ವಿಶೇಷ ಕೋರ್ಟ್ ಅನುಮತಿ ನೀಡಿದೆ. ಕುತೂಹಲಕಾರಿ ವಿಷಯವೇನೆಂದರೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದ ನಂತರವೂ ಯಾವುದೇ ಜಾಮೀನು ಅರ್ಜಿ ಸಲ್ಲಿಸಲು ಹೋಗಿಲ್ಲ ಎಂದು ರಾವತ್ ಪರ ವಕೀಲರು ತಿಳಿಸಿದ್ದಾರೆ.

ಆರಂಭಿಕವಾಗಿ ಸಂಜಯ್ ರಾವತ್ ಗೆ ಆಗಸ್ಟ್ 4ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ಬಳಿಕ ವಿಶೇಷ ಕೋರ್ಟ್ ಆಗಸ್ಟ್ 8ರವರೆಗೆ ಬಂಧನದ ಅವಧಿ ವಿಸ್ತರಿಸಿತ್ತು. ಇದೀಗ ಮತ್ತೆ ಆಗಸ್ಟ್ 22ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದೆ.

ವಸತಿ ಪುನರಾಭಿವೃದ್ಧಿ ಯೋಜನೆಗಳಿಂದ ರಾವತ್ ಮತ್ತು ಅವರ ಕುಟುಂಬ ಒಂದು ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆದಿದ್ದು, ಇದಕ್ಕಾಗಿ ಇನ್ನಷ್ಟು ದಿನಗಳ ಕಾಲ ವಶಕ್ಕೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಂಎಲ್ ಎ ವಿಶೇಷ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next