Advertisement

ರೈತರ ಸೇವೆಗೆಂದೇ ಕೃಷಿ ಖಾತೆ ಪಡೆದೆ: ಪಾಟೀಲ

02:27 PM Jan 15, 2021 | Team Udayavani |

ಹರಿಹರ: ರಾಜ್ಯದ ರೈತರ ಸೇವೆ ಮಾಡುವ ಉದ್ದೇಶದಿಂದ ಸಿಎಂಗೆ ಮನವಿ ಮಾಡಿ ಕೃಷಿ ಖಾತೆ ಪಡೆದುಕೊಂಡಿರುವುದಾಗಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಗುರುವಾರ ಎರಡನೇ ವರ್ಷದ ಹರ ಜಾತ್ರೆ ಅಂಗವಾಗಿ ನಡೆದ ಭೂತಪಸ್ವಿ ಸಮಾವೇಶದಲ್ಲಿ “ಪಂಚವಾಣಿ’ ಮಾಸಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪಡೆದ ನಂತರ ರೈತರ ಏಳ್ಗೆಗೆ ಪ್ರಾಮಾಣಿಕ ಪ್ರಯತ್ನಗಳು ನಡೆದಿಲ್ಲ. ಬಹುತೇಕ ರೈತರ ಬದುಕು ಈಗಲೂ ಶೋಚನೀಯವಾಗಿಯೇ ಇದೆ. ಆದ್ದರಿಂದ ರೈತರ ಪ್ರಗತಿಗೆ ಪೂರಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ಕೃಷಿ ಖಾತೆ ಪಡೆದುಕೊಂಡಿದ್ದೇನೆ. ರಾಜ್ಯಾದ್ಯಂತ ಸಂಚರಿಸಿ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ:ಮೂಲಸೌಕರ್ಯ ಅಭಿವೃದ್ಧಿಗೆ ಆಗ್ರಹ

ನೀರಾವರಿ ಸೌಲಭ್ಯ ಇರುವ ಮಂಡ್ಯ ಭಾಗದ ರೈತರು ಭತ್ತ ಮತ್ತು ಕಬ್ಬು ಬೆಳೆಯುತ್ತಾರೆ. ಈ ಬೆಳೆಗಳ ದರ ಇಳಿದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಆದರೆ ನೀರಿನ ಸೌಕರ್ಯವಿಲ್ಲದ ಕೋಲಾರದ ರೈತರು ಮಳೆ ಬಾರದಿದ್ದರೂ ಕೆಲ ಬೆಳೆಗಳ ದರ ಇಳಿದರೂ ಸಂಕಷ್ಟಕ್ಕೀಡಾಗುವುದಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಒಂದು ಅವಧಿಯಲ್ಲಿ 95 ಇದ್ದರೆ, ಆ ವರ್ಷ ಕೋಲಾರದಲ್ಲಿ ಕೇವಲ 5 ಇತ್ತು. ಕೋಲಾರದ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವುದೇ ಅವರ ಸ್ವಾವಲಂಬಿತನಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

Advertisement

ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ, ಮೀನು, ಮೊಲ ಸಾಕಾಣಿಕೆ, ಟೊಮ್ಯಾಟೋ ಕೆಚಪ್‌, ಕಬ್ಬಿನ ಜ್ಯೂಸ್‌, ಬೆಲ್ಲ, ಸಂಸ್ಕರಿಸಿದ ಗೋಮೂತ್ರ ತಯಾರಿಕೆಯಂತಹ ಚಟುವಟಿಕೆ ರೈತರ ಕೈ ಹಿಡಿಯುತ್ತದೆ. ಆಧುನಿಕತೆ, ತಂತ್ರಜ್ಞಾನದ ಬಳಕೆ ಮಾಡಿಕೊಂಡರೆ ಕಡಿಮೆ ಭೂಮಿಯಲ್ಲೂ ರೈತರು ಸಂತುಷ್ಟವಾಗಿ ಬದುಕು ನಡೆಸಲು ಸಾಧ್ಯ ಎಂದರು. ಅ ಧಿಕಾರಿಗಳ ಅಪಸ್ವರದ ನಡುವೆಯೂ ಬೆಳೆ ಸಮೀಕ್ಷೆಯನ್ನು ರೈತರಿಂದಲೇ ಮಾಡಿಸಲಾಯಿತು. 45 ದಿನಗಳ ಅವ  ಧಿಯಲ್ಲಿ 46 ಲಕ್ಷ ರೈತರು ಬೆಳೆ ಸಮೀಕ್ಷೆ ನೋಂದಣಿ ಮಾಡಿಸಿದರು ಎಂದ ಸಚಿವರು, ಆತ್ಮ ನಿರ್ಭರ ಯೋಜನೆಯಡಿ ಸಂಕಷ್ಟಕ್ಕೀಡಾಗಿದ್ದ ಮೆಕ್ಕೆಜೋಳ ಬೆಳೆಗಾರರಿಗೆ 500 ಕೋಟಿ ರೂ. ಸಹಾಯಧನ ನೀಡಲಾಯಿತು ಎಂದು ತಿಳಿಸಿದರು.

ಸಮಾಜದ ಮುಖಂಡ ಬಸವರಾಜ್‌ ದಿಂಡೂರು ಮಾತನಾಡಿ, ಇಡೀ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಗೊಬ್ಬರದ ಅಭಾವವಾಗದಂತೆ ಕೇಂದ್ರ ಸರಕಾರ ಉತ್ತಮ ವ್ಯವಸ್ಥೆ ಮಾಡಿದೆ. ಆಧುನಿಕತೆ, ಸಾವಯವ ಪದ್ಧತಿ ಮಾತ್ರ ರೈತರಿಗೆ ಸಂಜೀವಿನಿಯಾಗಿದೆ ಎಂದು ತಿಳಿಸಿದರು. ಇಳಕಲ್‌ ಚಿತ್ತರಗಿ ಶ್ರೀ ವಿಜ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ವಚನಾನಂದ ಸ್ವಾಮೀಜಿ, ಸಚಿವರಾದ ಜಗದೀಶ್‌ ಶೆಟ್ಟರ್‌, ಸಿ.ಸಿ. ಪಾಟೀಲ್‌, ಬಳ್ಳಾರಿ ಸಂಸದ ದೇವೇಂದ್ರಪ್ಪ, ನಶಾಸಕರಾದ ಅರವಿಂದ ಬೆಲ್ಲದ, ನೆಹರು ಓಲೆಕಾರ್‌, ವನಜಾಕ್ಷಿ ಬಿ.ಸಿ. ಪಾಟೀಲ್‌, ಬಾವಿ ಬೆಟ್ಟಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next