ಇಂಡಿ: 2018ರ ವಿಧಾನಸಭಾ ಚುನಾವಣೆಯಲ್ಲಿ ನಾನು ಪರಾಭವಗೊಂಡಿದ್ದೇನೆ. ಆದರೆ ನನಗೆ ನೋವಿಲ್ಲ. ನನ್ನಂತಹ ಸಾಮಾನ್ಯ ಕಾರ್ಯಕರ್ತನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಸುಮಾರು 40 ಸಾವಿರ ಮತ ನೀಡಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಋಣ ತಿರಿಸಲು ನಾನು ಬದ್ಧ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳ ಕರಪತ್ರ ವಿತರಣೆ ಮಾಡಿ ನಂತರ ಗ್ರಾಮಸ್ಥರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಿಮ್ಮ ಆಶೀರ್ವಾದ ಬಲದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಉತ್ಸುಕನಾಗಿದ್ದು ಹೈಕಮಾಂಡ್ ಟಿಕೆಟ್ ನೀಡುವ ವಿಶ್ವಾಸ ನನಗಿದೆ. ಒಂದು ವೇಳೆ ಬೇರೆ ಯಾರಿಗಾದರು ಟಿಕೆಟ್ ನೀಡಿದಲ್ಲಿ ಸಾಮಾನ್ಯ ಕಾರ್ಯಕರ್ತನಂತೆ ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತೇನೆ ಎಂದರು.
ನಾನು ರಾಜಕಾರಣ ಮಾಡುತ್ತಿರುವುದು ನನ್ನ ವೈಯಕ್ತಿಕ ಹಿತಾಸಕ್ತಿಗಲ್ಲ. ನಾನು ಬಿಜೆಪಿ ತತ್ವ ಸಿದ್ಧಾಂತವಾದ ದೇಶ ಮೊದಲು ಎಂಬ ಘೊಷ ವಾಕ್ಯದ ಮೇಲೆ ಮೇಲೆ ನಂಬಿಕೆ ಇಟ್ಟವನು. ಮೊದಲಿಗೆ ಆಡ್ವಾಣಿಯವರ ರಥ ಯಾತ್ರೆಯಿಂದ ಪ್ರೇರಣೆಗೊಂಡು ಬಿಜೆಪಿ ಸೇರ್ಪಡೆಗೊಂಡೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿಜಿಯವರ ಕೈ ಬಲಪಡಿಸಬೇಕು ಎಂದರು.
ಡಿ.ಎಸ್. ಪಾಟೀಲ, ಭೀಮರಾಯ ಪಾಟೀಲ, ಎಂ.ಎಸ್. ಮುಜಗೊಂಡ, ಸೋಮಶೇಖರ ದೇವರ, ಭೀಮಸಿಂಗ್ ರಾಠೊಡ, ಬಾಳು ಮುಳಜಿ, ವಿಠ್ಠಲ ಬಾಬಳಗಾಂವ, ಚನ್ನಬಸು ಮುಜಗೊಂಡ, ರಮೇಶ ಧರೆನ್ನವರ, ಸಿದ್ದಪ್ಪ ವಾಲಿ, ಅಶೋಕಗೌಡ ಪಾಟೀಲ, ಗಂಗಾಧರ ಪಾಟೀಲ, ಯಶವಂತ ಬಿರಾದಾರ, ಈರಣ್ಣ ಮುಜಗೊಂಡ, ಗೇನು ಗಿರಣಿವಡ್ಡರ, ವಿಜು ಮೂರಮನ, ದಯಾನಂದ ಹುಬಳ್ಳಿ, ಪ್ರದಿಪ ಉಟಗಿ, ಶರಣು ಬಂಡಿ, ಶಾಂತು ಬಿರಾದಾರ, ಶಾಂತು ಕಂಬಾರ ಸೇರದಂತೆ ಅನೇಕರು ಇದ್ದರು.