ಇಟಲಿ: ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಸಂಗೀತಗಾರರೊಬ್ಬರು ತಮ್ಮ ಒಂಬತ್ತು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಅವಧಿಯಲ್ಲಿ ಸ್ಯಾಕ್ಸೋಫೋನ್ ನುಡಿಸಿ ಜನಪ್ರಿಯರಾಗಿದ್ದಾರೆ.
ಜೀ ಝ್ ಎಂಬ 35 ವರ್ಷದ ಸಂಗೀತಕಾರ ರೋಮ್‌ನ ಪೀಡಿಯಾ ಇಂಟರ್‌ನ್ಯಾಷನಲ್ ಆಸ್ಪತ್ರೆಯಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಈ ವೇಳೆ ವೈದ್ಯರು ನಿರಂತರ ಒಂಬತ್ತು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ, ಆದರೆ ರೋಗಿ ಈ ವೇಳೆ ನಿರಂತರ ಒಂಬತ್ತು ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿಕೊಂಡು ಸಮಯ ಕಳೆದಿದ್ದಾರೆ.
ಡಾ. ಬ್ರೋಗ್ನಾ ಅವರನ್ನೊಳಗೊಂಡ ನುರಿತ ಹತ್ತು ವೈದ್ಯರ ತಂಡ ನಿರಂತರ ಒಂಬತ್ತು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದ್ದು ಸಂಗೀತಕಾರ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಯ ಮೊದಲು, ರೋಗಿ ತನ್ನ ಸಂಗೀತ ಸಾಮರ್ಥ್ಯಗಳ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ ಇದು ವೈದ್ಯರಿಗೆ ಉಪಯುಕ್ತವಾಗಿದೆ ಎಂದು ಸಾಬೀತಾಯಿತು, ಏಕೆಂದರೆ ಇದು ಮೆದುಳಿನ ವಿವಿಧ ಕಾರ್ಯಗಳನ್ನು ಮ್ಯಾಪ್ ಮಾಡಲು ವೈದ್ಯರ ತಂಡಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿ. ಝ್ 1970 ರ ಚಲನಚಿತ್ರ ‘ಲವ್ ಸ್ಟೋರಿ’ ಮತ್ತು ಇಟಾಲಿಯನ್ ರಾಷ್ಟ್ರಗೀತೆಯ ಥೀಮ್ ಹಾಡನ್ನು ಸೇರಿ 9 ಗಂಟೆಗಳ ಶಸ್ತ್ರಚಿಕಿತ್ಸೆಯ ಉದ್ದಕ್ಕೂ ನುಡಿಸಿದರು.