Advertisement

ಕೆರೂರಿನಲ್ಲಿ ಅರೆ ಸೇನಾ ಪಡೆಯಿಂದ ಪಥ ಸಂಚಲನ

05:47 PM Apr 18, 2018 | Team Udayavani |

ಕೆರೂರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ಷವಾಗಿ ಶಾಂತಿ, ಸುವ್ಯವಸ್ಥೆ ನಿರ್ವಹಣೆ, ರಕ್ಷಣೆ ನೀಡಲು ಆಗಮಿಸಿರುವ ಕೇಂದ್ರದ ಅರೆ ಸೇನಾ ಪಡೆಯ ಸುಮಾರು 60 ಹೆಚ್ಚು ಯೋಧರು ಮತ್ತು ಸ್ಥಳೀಯ ಪೊಲೀಸರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಯಿತು.

Advertisement

ಪೊಲೀಸ್‌ ಠಾಣೆಯ ಆವರಣದಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆಗುಂಟ ಮೇಗಾಡಿ, ಹೊಸಪೇಟೆ, ಕಿಲ್ಲಾಪೇಟೆ ಹಳಪೇಟೆ ಹಾಗೂ ಬಸ್‌ ನಿಲ್ದಾಣ ಮುಂತಾದ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿ ಯೋಧರು, ಪೊಲೀಸರು ಶಿಸ್ತಿನ ಪಥ ಸಂಚಲನದಿಂದ ನ್ಯಾಯ ಸಮ್ಮತ ಚುನಾವಣೆಗೆ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ಬೀರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಾದಾಮಿ ಸರ್ಕಲ್‌ ಇನ್ಸಪೆಕ್ಟರ್‌ ಕೆ.ಎಸ್‌. ಹಟ್ಟಿ, ಕೆರೂರ ಹೋಬಳಿ ಪ್ರದೇಶ ಬಾದಾಮಿ ಮತ್ತು ಬೀಳಗಿ (ಗ್ರಾಮೀಣ) ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹರಿದು ಹಂಚಿ ಹೋಗಿದ್ದು ಚುನಾವಣೆ ಕಾಲಕ್ಕೆ ಸೂಕ್ತ ರಕ್ಷಣೆಗಾಗಿ ಅರೆಸೇನಾ ಪಡೆ ಯೋಧರು ಆಗಮಿಸಿದ್ದಾರೆ ಎಂದರು. ಪಿಎಸ್‌ಐ ಧರ್ಮಾಕರ ಧರ್ಮಟ್ಟಿ, ಎಎಸ್‌ಐ ಐ.ಎಂ. ಹಿರೇಗೌಡ್ರ, ಎನ್‌. ಎಸ್‌. ಹೊಸಮನಿ, ಎನ್‌.ಎಸ್‌. ಸೀಮಾಣಿ ಹಾಗೂ ಪೊಲೀಸ್‌ ಪೇದೆಗಳು ಭಾಗವಹಿಸಿದ್ದರು.

ಮಹಾಲಿಂಗಪುರ: ಮೇ 12ರ ವಿಧಾನಸಭಾ ಚುನಾವಣೆಯ ನಿಮಿತ್ತ ಅರೆ ಸೇನಾ ಪಡೆ ಮತ್ತು ಪೊಲೀಸರಿಂದ ಪಟ್ಟಣದಲ್ಲಿ ಪಥ ಸಂಚಲನ ನಡೆಯಿತು.

ಜಮಖಂಡಿ ಡಿವೈಎಸ್‌ಪಿ ರಾಮನಗೌಡ ಹಟ್ಟಿ ಮಾತನಾಡಿ, ಚುನಾವಣೆಯಲ್ಲಿ ನಿರ್ಭಯವಾಗಿ ಸಾರ್ವಜನಿಕರು ಮತದಾನ ಮಾಡುವಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಯಾರು ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪಟ್ಟಣದ ಪ್ರತಿಯೊಂದು ಬೂತ್‌ನಲ್ಲಿ ಅಗತ್ಯ ಸಿಬ್ಬಂದಿ ನಿಯೋಜನೆ ಮೂಲಕ ನಿರಾತಂಕವಾಗಿ ಮತದಾನ ನಡೆಯಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು. ಪಥ ಸಂಚಲನವು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಪ್ರಾರಂಭವಾಗಿ ಪಟ್ಟಣದಾದ್ಯಂತ ಪಥ ಸಂಚಲನ ನಡೆಸಲಾಯಿತು. ಪಿಎಸೈ ರವಿಕುಮಾರ ಧರ್ಮಟ್ಟಿ, ಸಿಪಿಐ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next