ಮುಂಬಯಿ: ಕಿಂಗ್ ಖಾನ್ ಶಾರುಖ್ ಖಾನ್ ಬಹು ಸಮಯದ ಬಳಿಕ ಕಂಬ್ಯಾಕ್ ಮಾಡಿದ ʼಪಠಾಣ್ʼ ಸಿನಿಮಾ ಓಟಿಟಿ ರಿಲೀಸ್ ಗೆ ರೆಡಿಯಾಗಿದೆ.
ಸ್ಪೈ ಕಥಾಹಂದರ ಒಳಗೊಂಡ ʼಪಠಾಣ್ʼ ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ, ಜಾನ್ ಅಬ್ರಹಾಂ ಅವರ ಆ್ಯಕ್ಷನ್ ಸೀನ್ ಗಳನ್ನು ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದರು. ಜನವರಿ 25 ರಂದು ವಿಶ್ವಾದ್ಯಂತ ರಿಲೀಸ್ ಆದ ʼಪಠಾಣ್ʼ 56 ದಿನಗಳ ಬಳಿಕ ಓಟಿಟಿಗೆ ಎಂಟ್ರಿಯಾಗುತ್ತಿದೆ.
ವರ್ಲ್ಡ್ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ರೂ.ಗೂ ( ಅಂದಾಜು 1,046 ಕೋಟಿ ರೂ.) ಅಧಿಕ ಕಲೆಕ್ಷನ್ ಮಾಡಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಶಾರುಖ್ ಖಾನ್, ಇದೀಗ ಓಟಿಟಿ ಪರದೆಯಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ನಾಳೆಯಿಂದ ಅಂದರೆ ಮಾ. 22 ರಿಂದ ಸಿನಿಮಾ ಸ್ಟ್ರೀಮ್ ಆಗಲಿದೆ.
ಇದನ್ನೂ ಓದಿ: ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳ ಬಂಧನ
Related Articles
ಈ ಬಗ್ಗೆ ಪ್ರೈಮ್ ವಿಡಿಯೋ ಟ್ವೀಟ್ ಮಾಡಿದೆ. ಹಿಂದಿ, ತಮಿಳ ಹಾಗೂ ತೆಲುಗು ಭಾಷೆಯಲ್ಲಿ ʼಪಠಾಣ್ʼ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ಟ್ವೀಟಿಸಿದೆ.
ಯುಎಸ್, ಕೆನಡಾ, ಯುಎಇ, ಈಜಿಪ್ಟ್, ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ಸಿದ್ದಾರ್ಥ್ ಆನಂದ್ ಅವರ ಸಿನಿಮಾ ಬಿಡುಗಡೆ ಆಗಿತ್ತು.
ಭಾರತದಲ್ಲಿ ʼಪಠಾಣ್ʼ ಸಿನಿಮಾ ರಿಲೀಸ್ ವೇಳೆ ಭಾರೀ ವಿವಾದಕ್ಕೆ ಸಿನಿಮಾದ ʼಬೇಷರಂ ರಂಗ್ʼ ಹಾಡು ಕಾರಣವಾಗಿತ್ತು. ಅದೆಲ್ಲವನ್ನು ದಾಟಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು.
ಶಾರುಖ್ ಖಾನ್, ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ ಡಿಂಪಲ್ ಕಪಾಡಿಯಾ, ಅಶುತೋಷ್ ರಾಣಾ ಮತ್ತು ವಿಶೇಷ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು.