Advertisement
ಅಮೆರಿಕ: ಸ್ವಿಫ್ಟ್ ಪಾವತಿ ವ್ಯವಸ್ಥೆಯಿಂದ ರಷ್ಯಾಗೆ ಕೊಕ್, ಆರ್ಥಿಕ ದಿಗ್ಬಂಧನ, ತಂತ್ರಜ್ಞಾನ ರಫ್ತು ನಿಷೇಧಯುಕೆ: ರಷ್ಯಾದ ಬ್ಯಾಂಕುಗಳು, ಕಂಪನಿಗಳ ಮೇಲೆ ನಿರ್ಬಂಧ
ಐರೋಪ್ಯ ಒಕ್ಕೂಟ: ಹಣಕಾಸು, ಇಂಧನ, ಸಾರಿಗೆ ವ್ಯವಸ್ಥೆ ಮೇಲೆ ನಿರ್ಬಂಧ.
ಬುಡಾಪೆಸ್ಟ್ : ಅಂತಾರಾಷ್ಟ್ರೀಯ ಜುಡೋ ಒಕ್ಕೂಟದಿಂದ ಗೌರವಾಧ್ಯಕ್ಷ ಸ್ಥಾನ ಕಳೆದುಕೊಂಡ ಪುತಿನ್
ಕೆನಡಾ: ರಷ್ಯಾದ 58 ಶ್ರೀಮಂತ ವ್ಯಕ್ತಿಗಳು, ಸಂಸ್ಥೆಯ ವಿರುದ್ಧ ನಿರ್ಬಂಧ, 700 ದಶಲಕ್ಷ ಡಾಲರ್ ಮೌಲ್ಯದ ಸರಕುಗಳ ಪರವಾನಗಿ ರದ್ದು
ಜಪಾನ್: ರಷ್ಯಾ ನಾಗರಿಕರಿಗೆ ವೀಸಾ ವಿತರಣೆ ನಿಷೇಧ, ಆಸ್ತಿಪಾಸ್ತಿ ಸ್ತಂಭನ, ಸೇನಾ ಉದ್ದೇಶಕ್ಕೆ ಬಳಸುತ್ತಿದ್ದ ಸರಕುಗಳಿಗೆ ಬ್ಯಾನ್
ಜರ್ಮನಿ: ನಾರ್ಡ್ ಸ್ಟ್ರೀಮ್ 2 ಗ್ಯಾಸ್ ಪೈಪ್‌ಲೈನ್ ಯೋಜನೆ ಸ್ಥಗಿತ
ಆಸ್ಟ್ರೇಲಿಯಾ: ಉಕ್ರೇನ್‌ನ ಶ್ರೀಮಂತರು ಮಾತ್ರವಲ್ಲದೇ ರಷ್ಯಾಗೆ ನೆರವಾಗುತ್ತಿರುವ ಬೆಲಾರಸ್‌ನ ಪ್ರಮುಖರ ಮೇಲೂ ನಿರ್ಬಂಧ
ನ್ಯೂಜಿಲೆಂಡ್ : ರಷ್ಯಾ ಸೇನೆಗೆ ಸರಕು ರಫ್ತಿಗೆ ತಡೆ, ಪ್ರಯಾಣ ನಿರ್ಬಂಧ, ವ್ಯಾಪಾರವೂ ಸ್ಥಗಿತ
ತಮ್ಮ ವಾಯುಪ್ರದೇಶದಲ್ಲಿ ರಷ್ಯಾದ ಯಾವ ವಿಮಾನವನ್ನೂ ಪ್ರವೇಶಿಸಲು ಬಿಡುವುದಿಲ್ಲ ಎಂದು ಘೋಷಿಸಿಕೊಂಡ ದೇಶಗಳ ಸಂಖ್ಯೆ 13ಕ್ಕೇರಿವೆ. ಭಾನು ವಾರ ಫಿನ್ಲಂಡ್ ಮತ್ತು ಬೆಲ್ಜಿಯಂ ಕೂಡ ತಮ್ಮ ವಾಯುಗಡಿಯನ್ನು ಮುಚ್ಚಿವೆ. ಇದಕ್ಕೂ ಮುನ್ನ ಯುಕೆ, ಐರ್ಲೆಂಡ್, ಫಿನ್ಲಂಡ್, ಬೆಲ್ಜಿಯಂ, ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ಪೋಲೆಂಡ್, ಬಲ್ಗೇರಿಯಾ, ಚೆಕ್ ಗಣರಾಜ್ಯ, ಮಾಲ್ಡೋವಾ, ರೊಮ್ಯಾನಿಯಾ, ಸ್ಲೊವೇನಿಯಾ ಕೂಡ ಇದೇ ನಿರ್ಧಾರ ಕೈಗೊಂಡಿದ್ದವು.